ಲೇಖಕರಾದ ಡಾ. ಎ. ಸಿ. ನಾಗೇಶ ಹಾಗೂ ಎಚ್. ಪರಮೇಶ್ವರ ಅವರು ಬರೆದಿರುವ ಐತಿಹಾಸಿಕ ವಿಶ್ಲೇಷಣಾ ಕೃತಿ ಭಾರತದ ಸಮಾಜ ಮತ್ತು ಮತ ಸುಧಾರಕರು . ಕೃತಿಯ ಬೆನ್ನುಡಿಯಲ್ಲಿ ಡಾ . ಜಿ . ರಾಮಕೃಷ್ಣ ಅವರು ಬರೆದಿರುವಂತೆ, ಚರಿತ್ರೆಯ ನಿರ್ಮಾಪಕರು ಆಯಾ ಕಾಲಘಟ್ಟಗಳ ಜನತಾ ಸಮೂಹದೇ ಆದ್ದರಿಂದ ಯಾವುದೋ ಒಬ್ಬ ಧೀರೋದಾತ್ತ ವ್ಯಕ್ತಿ ಇಡೀ ಇತಿಹಾಸಕ್ಕೆ ತಿರುವು ನೀಡಬಹುದೆಂಬ ಮಿಥೈಯನ್ನು ಮರಸ್ಕರಿಸುವಂತಿಲ್ಲ . ಆದಾಗ್ಯೂ ತಮ್ಮ ಚಿಂತನೆ ಮತ್ತು ಕ್ರಿಯೆಗಳಿಂದ ಅನೇಕ ಮಹಾನ್ ವ್ಯಕ್ತಿಗಳು ಸಮುದಾಯದ ಆಶೋತ್ತರಗಳನ್ನು ಪ್ರತಿಫಲಿಸಿರುವುದುಂಟು . ಅಂತಹ ವ್ಯಕ್ತಿಗಳು ಯಾವುದೇ ಒಂದು ಕ್ಷೇತ್ರಕ್ಕೆ ಮತ್ತು ಕಾಲಮಾನಕ್ಕೆ ಸೀಮಿತವಾಗಿರುವುದಿಲ್ಲ . ಮತಧರ್ಮ , ರಾಜಕೀಯ ಜೀವನ , ತತ್ತ್ವಶಾಸ್ತ್ರ , ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಈ ಚಾರಿತ್ರಿಕ ವ್ಯಕ್ತಿಗಳು ಪುರಾಣಪುರುಷರಲ್ಲ , ರಂಜನೀಯ ಮಾತುಗಳನ್ನಾಡುವಂಥವರಲ್ಲ . ಆದರೆ ಉಪಯುಕ್ತ ವೈಚಾರಿಕ ಚಿಂತನೆ ನಡೆಸಿದವರಾಗಿರುತ್ತಾರೆ . ತನ್ಮೂಲಕ ಚರಿತ್ರೆಯಲ್ಲಿ ಶೋಭಿಸಿರುವ ಎಷ್ಟೋ ಚಳವಳಿಗೆ ಅಂಥವರು ಆದ್ಯ ಪ್ರವರ್ತಕರಾಗಿರುವುದೂ ಉಂಟು . ಒಂದರ್ಥದಲ್ಲಿ ಅವರು ಇತಿಹಾಸದ ಪಥಕ್ಕೆ ನಿರ್ದಿಷ್ಟ ದಿಕ್ಕುಗಳನ್ನು ನಿರ್ಮಿಸುವವರಾಗಿರುತ್ತಾರೆ . ವಿಶ್ವದ ಮನುಕುಲದ ಇತಿಹಾಸದಲ್ಲಿ ಅವರಿಗೆ ಪ್ರಶಸ್ತ ಸ್ಥಾನಗಳು ದೊರೆತಿರುವುದು ಅವರ ಮತಿಯಿಂದ , ಆಳವಾದ ದಾರ್ಶನಿಕ ದೃಷ್ಟಿಯಿಂದ ಮತ್ತು ಚೇತೋಹಾರಿ ಪ್ರಗಲ್ಯ ಕಾರ್ಯನಿರ್ವಹಣೆಯಿಂದ , ಮಾನವ ಸಮಾಜದ ಮೌಲಿಕ ಏಳಿಗೆಗೆ ಅಂಥವರ ಕೊಡುಗೆಯು ಅವಿಸ್ಮರಣೀಯ . ಅಂಥವರು ತಮ್ಮ ಅಸಾಧಾರಣ ಪ್ರತಿಭಾನ್ವಿತ ಹೆಗ್ಗಳಿಕೆಯನ್ನು ಎಲ್ಲೋ ಗುಹೆಯಲ್ಲಿ ಕೂತು ಸಂಪಾದಿಸಿದ್ದಲ್ಲ . ಜನರ ನಡುವಿನಿಂದಲೇ ಬಂದ ಈ ಜನ ಅಸಾಮಾನ್ಯರಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.
©2024 Book Brahma Private Limited.