ಯಾವುದೇ ದೇಶದ ಚರಿತ್ರೆಯನ್ನು ನಿರ್ಮಿಸುವಲ್ಲಿ ಆಯಾ ದೇಶದ ಭೌಗೋಳಿಕತೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಭಾರತದ ಮೇಲೆ ಆದ ಪರಕೀಯರ ಆಕ್ರಮಣಕ್ಕೆ ಪ್ರದೇಶದ ಭೌಗೋಳಿಕತೆಯ ಉಪಯೋಗವನ್ನು, ಅಥವಾ ಪ್ರಾಕೃತಿಕ ಸ್ವರೂಪವು ತರಬಹುದಾದ ಅಪಾಯಗಳನ್ನು ನಮ್ಮ ಆಡಳಿತಗಾರರು ಅರಿತುಕೊಳ್ಳದಿರುವುದೇ ಪ್ರಮುಖ ಕಾರಣ. ಇಂದು ಕೂಡ ದೇಶ ರಕ್ಷಣೆಯ ವಿಷಯದಲ್ಲಿ ಭೌಗೋಳಿಕತೆಯನ್ನು ಪ್ರಮುಖವಾಗಿ ಪರಿಗಣಿಸಲೇಬೇಕು. ಈ ದಿಸೆಯಲ್ಲಿ ಎದುರಾಗುವ ಅಗಾಧವಾದ ಸಮಸ್ಯೆಗಳ ಪ್ರಮುಖ ಅಂಶಗಳತ್ತ ನಮ್ಮ ಗಮನವನ್ನು ಸೆಳೆಯುವ ಕಾರ್ಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
©2025 Book Brahma Private Limited.