ಇಎಂಎಸ್ ಭಾರತೀಯ ಕಮ್ಯುನಿಸ್ಟ್ ಚಿಂತಕರಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿದ್ದಾರೆ ಎನ್ನುತ್ತಾರೆ ಪ್ರಸಿದ್ದ ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್. ಅವರದ್ದು ಭಾರತೀಯ ಇತಿಹಾಸದೊಳಗಿನ ಒಂದು ಪ್ರಮಾಣಪೂರಿತ ಅನ್ವೇಷಣೆ ಎನ್ನುವ ಪಟ್ನಾಯಕ್, ಸಹಜವಾಗಿಯೇ ಇಂತಹ ಅನ್ವೇಷಣೆಗಳಲ್ಲಿ ಯಾಂತ್ರಿಕ ವಿಶ್ಲೇಷಣೆಗಾಗಲಿ, ಸರಳೀಕರಣಕ್ಕಾಗಲೀ ಅವಕಾಶ ಇಲ್ಲ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ ನೆಹರೂರವರ ನೇತೃತ್ವವನ್ನು ಶ್ರಮಜೀವಿ ವರ್ಗದ ಕಣ್ನೋಟದಿಂದ ಪರಿಶೀಲಿಸುವಾಗಲೇ ರಾಷ್ಟ್ರೀಯ ಆಂದೋಲನದಲ್ಲಿ ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಅಮೋಘ ಪಾತ್ರದ ಕುರಿತು ಒಳನೋಟಗಳಿಂದ ಕೂಡಿದ ವಿಶ್ಲೇಷಣೆಗಳು ಕಾಣುತ್ತವೆ. ಉದಾರೀಕರಣ ಜಾಗತೀಕರಣದ ಈ ಯುಗದಲ್ಲಿ ಕಾಂಗ್ರೆಸ್ ಪಕ್ಷ ಗಾಂಧಿ-ನೆಹರೂ ಪರಂಪರೆಯಿಂದ ದೂರ ಸರಿದಿದೆ ಎಂಬ ಕಳವಳದ ಮಾತುಗಳು ಕೇಳಬರುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ? ನಿಜವಾಗಿಯೂ ಗಾಂಧಿ-ನೆಹರೂ ಬಳುವಳಿ ಎಂದರೆ ಏನು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೆರವಾಗುವಂತಹ ಅವರ ಬರವಣಿಗೆಗಳ ಒಂದು ಕಿರುಸಂಗ್ರಹ ಇದು.
©2025 Book Brahma Private Limited.