ಖ್ಯಾತ ಲೇಖಕ ಹೂ.ವೆ. ಶೇಷಾದ್ರಿ ಅವರ ಕೃತಿ-ಯುಗಾವತಾರ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧರಿತ ಐತಿಹಾಸಿಕ ಕೃತಿ ಇದು. ಅಸಾಧಾರಣ ಯುದ್ಧಕೌಶಲ, ಪ್ರತಿಭೆ-ಪೌರುಷಗಳಿಂದ ಇತಿಹಾಸದಲ್ಲಿ ಶಾಸ್ವತ ಸ್ಥಾನ ಪಡೆದ ಶಿವಾಜಿ, ಮಾತೃಭೂಮಿ ಅಥವಾ ದೇಶಾಭಿಮಾನದ ದ್ಯೋತಕವಾಗಿದ್ದಾರೆ. ದೇಶದಲ್ಲಿ ಎಲ್ಲೆಡೆ ಪಾರತಂತ್ರ್ಯದ ಬಿರುಗಾಳಿ ಭೀಕರವಾಗಿ ಬೀಸುತ್ತಿದ್ದ ಮೃತ್ಯುಸಂಕಟ ಸಮಯದಲ್ಲೂ ವಿವೇಕ, ತಾಳ್ಮೆಯಿಂದ ಎದುರಿಸಿದ ಶಿವಾಜಿ ಛತ್ರಪತಿಯ ಸುತ್ತ ಹೆಣೆದ ಇತಿಹಾಸದ ಘಟನಾವಳಿಗಳು ಇಲ್ಲಿ ಕಥನ ಶೈಲಿಯಲ್ಲಿ ಮೇಳವಿಸಿವೆ.
ಯುಗವತಾರ - ಶಿವಾಜಿ ಜೀವನಾಧಾರಿತ ಪುಸ್ತಕ ಪರಿಚಯ
©2025 Book Brahma Private Limited.