ಎ.ಜಿ. ನೂರಾನಿ ಅವರ 'ಸಾವರ್ಕರ್, ಗೋಡ್ಸೆ ನಂಟು ಮತ್ತು ಹಿಂದುತ್ವ ಸಿದ್ದಾಂತ' ಕೃತಿ ಪ್ರಸ್ತುತ ಸಮಾಜ ಗಾಂಧಿ ಹಂತಕ ಗೋಡ್ಸೆ ಮತ್ತು ಆತನ ಗುರು ಎನಿಸಿಕೊಂಡ ವಿ.ಡಿ. ಸಾವರ್ಕರ್ ಜೊತೆಗಿನ ಸಂಬಂಧವನ್ನು ಎತ್ತಿ ತೋರಿಸಲು ಯತ್ನಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ರಾಜಕಾರಣಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆ ಇಬ್ಬರನ್ನೂ ಅಮಾಯಕರಂತೆ ಬಿಂಬಿಸುತ್ತಿರುವುದನ್ನು ನೂರಾನಿ ತಮ್ಮ ಬರವಣಿಗೆಯ ಮೂಲಕ ಪ್ರಶ್ನಿಸಿದ್ದಾರೆ. ಹಾಗೆ ಅವರನ್ನು ಮುಗ್ಧರು ಎಂಬಂತೆ ಬಿಂಬಿಸುವುದರಿಂದ ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಆಗುವ ಲಾಭವನ್ನು ಒರೆಗೆ ಹಚ್ಚಿದ್ದಾರೆ.
ಕೃತಿ ಆರು ಅಧ್ಯಾಯಗಳನ್ನು ಒಳಗೊಂಡಿದೆ. ಚಿಂತಕ ಸುರೇಶ್‌ಭಟ್ ಬಾಕ್ರಬೈಲು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಸಾವರ್ಕರ್ ರಾಷ್ಟ್ರೀಯವಾದದ ಗುರಿಯೇನು, ಅಂಡಮಾನ್ ದ್ವೀಪ ಸಮೂಹ ಮತ್ತು ಹಿಂದುತ್ವದ ಉಗಮ, ಹಿಂದುತ್ವಕ್ಕೆ ಎದುರಾಗಿ ಹಿಂದೂ ಧರ್ಮ, ಗಾಂಧಿ ಹತ್ಯೆ ಮತ್ತು ಅದರ ಪರಿಣಾಮಗಳು ಇತ್ಯಾದಿ ಅಧ್ಯಾಯಗಳು ಪ್ರಸ್ತುತ ರಾಜಕಾರಣವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುತ್ತವೆ.
©2024 Book Brahma Private Limited.