ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು

Author : ಹಸನ್ ನಯೀಂ ಸುರಕೋಡ

Pages 56

₹ 50.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಮೊಗಲರು ಕೊಟ್ಟ ಕೊಡುಗೆಗಳನ್ನು ನೆನೆಯುವಾಗ ಅಕ್ಬರ್‌ ಹೆಚ್ಚು ನೆನಪಾಗುತ್ತಾನೆ. ಔರಂಗಾಜೇಬ್‌ ಮರೆತೇ ಹೋಗುತ್ತಾನೆ. ಆತನನ್ನು ಕ್ರೂರಿಯನ್ನಾಗಿಯೂ, ಮೂಲಭೂತವಾದಿಯನ್ನಾಗಿಯೂ ಚಿತ್ರಿಸಲಾಗಿದೆ. ಆದರೆ ವಾಸ್ತವಾಂಶ ಆತನ ಈ ಅವಗುಣಗಳನ್ನು ನಿರಾಕರಿಸುತ್ತದೆ. ದಾಳಿಕೋರನೊಳಗೇ ಧರ್ಮಬೀರುವೂ ಅಡಗಿದ್ದ ಎಂಬುದನ್ನು ಚಿತ್ರಿಸುತ್ತದೆ ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು ಕೃತಿ. ಉರ್ದುವಿನಲ್ಲಿ ಬಿ.ಎನ್. ಪಾಂಡೆ ಬರೆದಿರುವ ಕೃತಿಯನ್ನು ಸಾಹಿತಿ ಹಸನ್ ನಯೀಂ ಸುರಕೋಡ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಔರಂಗಜೇಬ ದೇವಾಲಯಗಳ ಒಳಿತಿಗಾಗಿ ಹೊರಡಿಸಿದ ಆಜ್ಞೆಗಳನ್ನು ಕೃತಿ ಆಧಾರ ಸಹಿತವಾಗಿ ಚರ್ಚಿಸುತ್ತದೆ. ಎಲ್ಲಿಯೂ ಭಾವನಾತ್ಮಕ ಅಂಶಗಳಿಗೆ ಆಸ್ಪದ ನೀಡದೆ ಪುರಾವೆಗಳ ಬೆಳಕಿನಲ್ಲಿಯೇ ನಡೆಯುತ್ತದೆ. ಉಜ್ಜಿನದ ಮಹಾಕಾಲೇಶ್ವರ ಮಂದಿರದಲ್ಲಿ ನಂದಾ ದೀಪ ನಿರಂತರವಾಗಿ ಪ್ರಜ್ವಲಿಸುವಂತೆ ನೋಡಿಕೊಳ್ಳುವಲ್ಲಿ ಔರಂಗಜೇಬನ ಪಾತ್ರ ಮಹತ್ವವಾದುದು. ಈ ದೀಪ ಬೆಳಗುತ್ತಿರಲೆಂದು ಸ್ಥಳೀಯ ಆಡಳಿತದ ಪರವಾಗಿ ಪ್ರತಿ ದಿನ ನಾಲ್ಕು ಸೇರು ತುಪ್ಪವನ್ನೊದಗಿಸುವಂತೆ ಮುರಾದ್ ಬಳ್ ಜಾರಿ ಮಾಡಿದ ಆದೇಶದ ಪ್ರತಿ ಇಂದಿಗೂ ಉಳಿದುಕೊಂಡಿದೆ ಎಂದು ಕೃತಿ ಹೇಳುತ್ತದೆ. ಅಂತೆಯೇ ಗೋಳ್ಕೊಂಡಾದ ಜಾಮಿಯಾ ಮಸೀದಿಯನ್ನು ಬೀಳಿಸಿದ ಪ್ರಸಂಗವನ್ನು ಹೇಳುತ್ತಾ, ಔರಂಗಝೇಬ್ ಕೂಡ ತನ್ನ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದನೇ ಹೊರತು, ಧಾರ್ಮಿಕ ಹಿತಾಸಕ್ತಿಗಳಿಗೆ ಪೂರಕವಾಗಿ ಅಲ್ಲ ಎಂದು ಸಮರ್ಥಿಸುತ್ತದೆ.  ಔರಂಗಜೇಬನ ಬಗೆಗೆ ಇದ್ದ ಪೂರ್ವಗ್ರಹಗಳನ್ನು ಕೃತಿ ಹೋಗಲಾಡಿಸಲು ಯತ್ನಿಸುತ್ತದೆ. 

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Reviews

ನಾವು ತಿಳಿಯದ ಔರಂಗಜೇಬ- ವಾರ್ತಾಭಾರತಿ

 

ಹೊಸತು- ಡಿಸೆಂಬರ್‌ -2005

ಇತಿಹಾಸದ ಪುಸ್ತಕ ರಚನೆಯಲ್ಲಿ ವಸ್ತುನಿಷ್ಠತೆ ಇರಬೇಕೆಂಬುದು ಆದರ್ಶವಾದರೂ ಹಲವಾರು ಇತಿಹಾಸದ ಪುಸ್ತಕಗಳು ಲೇಖಕರ ಪೂರ್ವಾಗ್ರಹ ಮನೋಭಾವದಿಂದ ಓದುಗರಿಗೆ ದಿಕ್ಕು ತಪ್ಪಿಸುತ್ತವೆ. ಇತಿಹಾಸದ ಪಠ್ಯಪುಸ್ತಕಗಳು ಇದಕ್ಕೆ ಹೊರತಲ್ಲ. ಶಿವಾಜಿ, ಟಿಪ್ಪ ಸುಲ್ತಾನ, ಔರಂಗಜೇಬ್ ಇಂತಹವರ ಬಗ್ಗೆ ಸಾಕಷ್ಟು ಅತಿರೇಕದ ಬರಹಗಳು ರಚಿತವಾಗಿವೆ. ಹಿಂದೂ ವಿರೋಧಿ ಎಂಬುದು ಔರಂಗಜೇಬನ ಬಗ್ಗೆ ಪ್ರಚಲಿತವಾಗಿರುವ ನಂಬಿಕೆ. ಆದರೆ ಪಾಂಡೆಯವರ ಪುಸ್ತಕ ಔರಂಗಜೇಬನು ಅಂತಹ ಮತಾಂಧನಾಗಿರಲಿಲ್ಲ ಎಂಬ ಸಂಗತಿಗಳನ್ನು ಹಲವಾರು ಪುರಾವೆಗಳಿಂದ ಚಿತ್ರಿಸುತ್ತದೆ. ಔರಂಗಜೇಬನ ಹಲವಾರು ಆದೇಶಗಳ ಪಠ್ಯಗಳು, ಇತಿಹಾಸ ಹಾಗೂ ಕೋಮುವಾದದ ಬಗ್ಗೆ ಕಾಸ್ತ್ರಿ ಅವರು ಬರೆದ ಲೇಖನ ಉಪಯುಕ್ತವಾಗಿದೆ. ಅನುವಾದ ಸಹ ಉತ್ತಮವಾಗಿದೆ.

Related Books