`ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ' ಇತಿಹಾಸ ಬರಹದ ಪುಸ್ತಕವಿದು. ಲೇಖಕ ಎನ್.ಪಿ. ಶಂಕರನಾರಾಯಣ ರಚಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಬಹುಮುಖಿಯಾದ್ದು. ಗಾಂಧೀಜಿಯಂತಹ ಸೌಮ್ಯವಾದಿಗಳ, ಸಾವರ್ಕರರಂತಹ ಕ್ರಾಂತಿಕಾರಿಗಳ ಹೋರಾಟದ ದಾರಿ ಭಿನ್ನ. ಭಿನ್ನ ಹೋರಾಟದಲ್ಲಿ ತೊಡಗಿದ ಹಲವರು ಬ್ರಿಟಿಷ್ ನ್ಯಾಯಾಲಯಗಳ ಕಟಕಟೆಯಲ್ಲಿ ನಿಂತು ಮೊಕದ್ದಮೆ ಎದುರಿಸಬೇಕಾಯಿತು. ಈ ಹೋರಾಟಗಾರರ ವಾದ ಸರಣಿಯಲ್ಲಿನ ವಿಚಾರಗಳು ದೇಶಾದ್ಯಂತ ಸ್ವದೇಶ ಪ್ರೇಮದ ಹೆದ್ದೆರೆಗಳನ್ನು ಎಬ್ಬಿಸಿದವು. ಈ ಪ್ರಜ್ವಲ ಪ್ರಸಂಗಗಳ ಸ್ಮರಣೆ ಈ ಗ್ರಂಥ. ಇತಿಹಾಸದ ಕುರಿತು ಲೇಖಕರು ಹೊಂದಿದ ಒಳನೋಟ ಓದುಗರಿಗೊಂದು ಹೊಸನೋಟ ನೀಡಬಲ್ಲದ್ದಾಗಿದೆ ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.
©2025 Book Brahma Private Limited.