`ಸ್ವಾತಂತ್ರ್ಯೋದಯದ ಮೈಲುಗಲ್ಲುಗಳು' ಸ್ವಾತಂತ್ಯ್ರ ಹೋರಾಟದ ಹಾದಿಯನ್ನು ಕಟ್ಟಿಕೊಡುವ ಲೇಖನ ಬರಹಗಳ ಸಂಗ್ರಹವಿದು. ಲೇಖಕ ಎಸ್. ಆರ್. ರಾಮಸ್ವಾಮಿ ಅವರು ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಆಂದೋಲನದ ವಿವಿಧ ಮುಖಗಳನ್ನು ಪರಿಚಯಿಸಲು, ಸ್ವಾತಂತ್ರ್ಯ ಹೋರಾಟದ ಕುರಿತು ಹರಡಿದ ವಿಕೃತ ಕಲ್ಪನೆಗಳನ್ನು ಕಿತ್ತೆಸೆಯಲು, ಯುವ ಜನತೆಗೆ ಧೈಯನಿಷ್ಠೆ, ಕಾರ್ಯಶೀಲತೆ, ಕ್ಷಾತ್ರಪ್ರವೃತ್ತಿಗಳಿಗೆ ಸ್ಫುರಣೆ ನೀಡಲು, ಸ್ವಾತಂತ್ರ್ಯದ ಸಾರ್ಥಕತೆ ಹೇಗೆ ಎಂಬ ಪ್ರಶ್ನೆಗೆ ಪರಿಹಾರ ಹುಡುಕುಲು ಅಗತ್ಯವಾದ ಗ್ರಂಥ. ಪ್ರಖರ ರಾಷ್ಟ್ರೀಯತೆಯ ಅರಿವು ಸ್ವಾತಂತ್ರ್ಯೋತ್ತರ ದಶಕಗಳಲ್ಲಿ ಗ್ರಾಸಗೊಂಡಿದ್ದು ಹೇಗೆ? ಅದರಿಂದಾದ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಲು ಹಾಗೂ ಓದುಗರಿಗೆ ಭಾರತದ ಸುವರ್ಣ ಸ್ವಾತಂತ್ರ್ಯ ಮಹೋತ್ಸವಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯದ ಕೊಡುಗೆಯಾಗಿ ಈ ಕೃತಿಯು ಹೊರಬಂದಿದೆ.
©2024 Book Brahma Private Limited.