ಬರಹಗಾರ ಸಿ.ಕೆ.ಎನ್. ರಾಜರವರು ಹುಟ್ಟಿದ್ದು 1932 ಫೆಬ್ರುವರಿ 19ರಂದು. ನಂಜನಗೂಡು ಇವರ ಹುಟ್ಟೂರು. ತಂದೆ ಸಿ.ಕೆ. ನಾಗಪ್ಪ, ತಾಯಿ ಸೀತಾ ಲಕ್ಷ್ಮಮ್ಮ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪದವಿ ಪಡೆದ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲಿ ವೃತ್ತಿ ಆರಮಭಿಸಿದ ಇವರು ನಂತರ ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಹಾಗೂ ಕರ್ನಾಟಟ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ರೀಡರ್ ಆಗಿ ಕಾರ್ಯನಿರ್ವಹಿಸಿದ್ದರು. ಬೇರೆ ಬೇರೆ ದಿನಪತ್ರಿಕೆಗಳಿಗೆ ಧಾರಾವಾಹಿ ರೂಪದಲ್ಲಿ ಕಾದಂಬರಿ ರಚಿಸಿ ಪ್ರಕಟಿಸಿದ ಇವರು ಹಾಸ್ಯ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡರು. ಪಂಡಿತ್‌ಜೀಗೆ ಸೈನೋಸೈಟಿಸ್, ಪುನರುತ್ಥಾನ, ಹಾಗೂ ರಾಯರ ವಠಾರ ಇವರ ಪ್ರಮುಖ ಕೃತಿಗಳು.