ಇತಿಹಾಸಕಾರ ಕೃಷ್ಣ ಮೋಹನ್ ಶ್ರೀಮಾಲಿ ಬರೆದಿರುವ 'ಕಬ್ಬಿಣ ಯುಗ ಮತ್ತು ಧಾರ್ಮಿಕ ಕ್ರಾಂತಿ' ಕೃತಿಯನ್ನು ನಾ. ದಿವಾಕರ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದೂ ಧರ್ಮದ ಪುನರ್ ಸ್ಥಾಪನೆಗಾಗಿ ಕೆಲವು ಶಕ್ತಿಗಳು ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಈ ಅಧ್ಯಯನ ಭಾರತೀಯ ಪ್ರಾಚೀನ ಸಮಾಜದ ಮೇಲೆ ಬೆಳಕು ಚೆಲ್ಲುತ್ತದೆ. ಮತ್ತು ಹುಸಿ ಧಾರ್ಮಿಕವಾಗಿ, ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಬೆಳೆಯುತ್ತದೆ. ಇತಿಹಾಸದ ವಿವಿಧ ಕಾಲಘಟ್ಟಗಳ, ವಿವಿಧ ಮಜಲುಗಳನ್ನು ಗ್ರಹಿ ಸುವುದರೊಂದಿಗೆ, ಸಮಕಾಲೀನ ಸಂದರ್ಭದಲ್ಲಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಪುನರ್ ವ್ಯಾಖ್ಯಾನ ಮಾಡುವ ನಿಟ್ಟಿನಲ್ಲಿ ಈ ಕೃತಿ ಮಹತ್ವ ಪಡೆಯುತ್ತದೆ. ಕಬ್ಬಿಣದ ಆವಿಷ್ಕಾರ, ಅದರ ಬಳಕೆಯಿಂದ ಆದ ಆರ್ಥಿಕ ಸಾಮಾಜಿಕ ಬದಲಾವಣೆಗಳು, ಜಾತಿ ವ್ಯವಸ್ಥೆಯ ಬೆಳವಣಿಗೆ, ಪ್ರಭುತ್ವ ಮತ್ತು ಮಗಧ ಸಾಮ್ರಾಜ್ಯದ ಉದಯ, ಬೌದ್ಧ, ಜೈನ ಧರ್ಮಗಳ ಬೆಳವಣಿಗೆ ಮತ್ತು ಬೌದ್ಧಿಕ ಮಂಥನ ಮುಂತಾದ ಅಂಶಗಳನ್ನು ಒಳಗೊಂಡ ಕೃತಿ ಇದಾಗಿದೆ.
©2025 Book Brahma Private Limited.