ಹಿರಿಯ ಲೇಖಕ-ಸಾಹಿತಿ-ಅನುವಾದಕ ಜಿ.ಎನ್ ರಂಗನಾಥ ರಾವ್ ಅವರು ಅನುವಾದಿಸಿದ ಕೃತಿ- ’ ಬಾಪೂ ನಂತರದ ಭಾರತ ’. ಮೂಲ ಕೃತಿಯನ್ನು ಲೇಖಕ ರಾಮಚಂದ್ರ ಗುಹ ಅವರು ಇಂಗ್ಲಿಷಿನಲ್ಲಿ ರಚಿಸಿದ್ದಾರೆ. ಈ ಕೃತಿಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಅಪೂರ್ವ ಇತಿಹಾಸವಾಗಿದೆ. ಮೈ ಜುಂ ಎನ್ನಿಸುವ ಕಥಾನಕ. ಗತಕಾಲದಲ್ಲಿ ಓದುಗರನ್ನು ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಈ ಕಥಾನಕದಲ್ಲಿ ಸ್ವಾತಂತ್ಯ್ರೊತ್ತರ ಭಾರತದ ಅರವತ್ತೈದು ವರ್ಷಗಳ ಜ್ವಲಂತ ಚಿತ್ರಣವಿದೆ. ಸ್ವಾತಂತ್ಯ್ರದ ಸಂಭ್ರಮ, ವಿಭಜನೆಯ ನೋವು, ರಾಜಮಹಾರಾಜರ ತಂಟೆ -ತಕರಾರು, ಈಶಾನ್ಯದಲ್ಲಿ ಸಿಡಿದ ಕಿಡಿಗಳು, ಕಾಶ್ಮೀರದ ತವಕ ತಲ್ಲಣಗಳು , ತುರ್ತು ಪರಿಸ್ಥಿತಿಯ ಅತಿರೇಕಗಳು, ಪಕ್ಷ ರಾಜಕೀಯ, ಅಭಿವೃದ್ಧಿಯ ಆಯಾಮಗಳು, ಆರ್ಥಿಕ ಪ್ರಗತಿ, ಜನ ಸಾಮಾನ್ಯರ ದಿನಮಾರ್ದನಿಗಳು, ದುಃಖ-ದುಮ್ಮಾನಗಳು ಇವೆಲ್ಲವೂ ಒಳಗೊಂಡಿವೆ. ಜೊತೆಗೆ, ಗಾಂಧೀಜಿ, ನೆಹರು, ಪಟೇಲ್, ಅಂಬೇಡ್ಕರ್, ಜಿನ್ನಾ, ಮುರಾರ್ಜಿ , ಶಾಸ್ತ್ರಿ, ಜೆಪಿ, ಇಂದಿರಾ ಗಾಂಧಿ, ಚರಣ್ ಸಿಂಗ್.. ಹೀಗೆ ತಮ್ಮ ವರ್ಚಸ್ಸಿನಿಂದ , ಸಾಧನೆಗಳಿಂದ ಇತಿಹಾಸ ನಿರ್ಮಿಸಿದವರೆಲ್ಲರೂ ಈ ಕಥಾನಕದಲ್ಲಿದ್ದಾರೆ.
©2024 Book Brahma Private Limited.