ಪುರಾಣ ಮತ್ತು ವಾಸ್ತವ

Author : ಟಿ.ಎಸ್. ವೇಣುಗೋಪಾಲ್

Pages 158

₹ 125.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಭಾರತೀಯ ಇತಿಹಾಸ ಲೇಖನದ ಚಿಂತನಾಗತಿಯನ್ನು ಬದಲಿಸಿದ ಇತಿಹಾಸಕಾರ ಡಿ.ಡಿ.ಕೊಸಾಂಬಿಯವರ ಅನನ್ಯ ಕೃತಿ Myth and Reality ಕನ್ನಡ ಅನುವಾದ. ನಾಗರಿಕತೆ ಆರಂಭವಾದಾಗಿನಿಂದಲೂ ಮೂಲೆಗುಂಪಾಗದೆ ಉಳಿದುಕೊಂಡ ಕೆಲವು ಭಾರತೀಯ myth (ಪುರಾಣ)ಗಳ ಮತ್ತು ವಿಧಿ ritual ಗಳ ಮೂಲವನ್ನು ಹುಡುಕುವುದು ಕೃತಿಯ ಉದ್ದೇಶ. ಇದರಲ್ಲಿ ಭಗವದ್ಗೀತೆ, ಊರ್ವಶಿ-ಪುರೂರವ ಪ್ರಸಂಗ ಮತ್ತು ಕೂಡುದಾರಿಯಲ್ಲಿ ಮಾತೃದೇವತೆಗಳ ನೆಲೆ ಎಂಬ ಮೂರು ಬರಹಗಳಿವೆ.

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Reviews

ಹೊಸತು-2004- ಮಾರ್ಚ್

ಭಾರತೀಯ ಇತಿಹಾಸ ತತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿ ಚರಿತ್ರೆಯನ್ನು ಅರ್ಥೈಸುವಲ್ಲಿ ಹೊಸದಿಕ್ಕು ತೋರಿದ ಶ್ರೇಷ್ಠ ವಿದ್ವಾಂಸರು ಶ್ರೀ ಡಿ. ಡಿ. ಕೊಸಾಂಬಿ ಚರಿತ್ರೆಯು ಹಾದುಹೋದ ಪ್ರತಿಹಂತದ ಗುರುತುಗಳನ್ನೂ ಎಚ್ಚರಿಕೆಯಿಂದ ವಿಶ್ಲೇಷಿಸುತ್ತ ಭಾರತೀಯ ಪುರಾಣಗಳ ಭೌತಿಕ ನೆಲೆಯನ್ನು ಶೋಧಿಸುವ ಅವರ ದೃಷ್ಟಿಕೋನ ಅನನ್ಯವಾಗಿದೆ. ಚರಿತ್ರೆ ಅಥವಾ ಅಲ್ಲಿ ಉಲ್ಲೇಖಿಸಲ್ಪಟ್ಟ ಸಮಾಜ ಕೇವಲ ಮೇಲ್ವರ್ಗ ಮತ್ತು ಆಳುವವರದ್ದು ಮಾತ್ರ ವಾಗಿರದೆ ಶ್ರೀಸಾಮಾನ್ಯನೂ ಅದರಲ್ಲಿ ಸೇರಿರುತ್ತಾನೆಂಬ ಸತ್ಯದ ಅರಿವು ಮೂಡಿಸುತ್ತದೆ.

Related Books