ಹೈದರಾಬಾದ ಸಂಸ್ಥಾನದಲ್ಲಿನ ಚಾರಿತ್ರಿಕ ಸ್ವಾತಂತ್ಯ್ರಾಂದೋಲನ ಕೃತಿಯನ್ನು ಹಿರಿಯ ವಿದ್ವಾಂಸ ಪ್ರೊ. ಎಂ. ಧ್ರುವನಾರಾಯಣ ಅವರು ಹೊರತಂದಿದ್ದಾರೆ.
ಹೈದರಾಬಾದ ಸಂಸ್ಥಾನದ ಚರಿತ್ರೆಯನ್ನು ವಿವರಿಸುವುದಕ್ಕಾಗಿ ಅಲ್ಲಿ ಆಳ್ವಿಕೆ ನಡೆಸಿದ ಅಸಫ್ ಜಾಹಿರಾಜ ಮನೆತನದ ಇತಿಹಾಸ, ಆಡಳಿತ ವ್ಯವಸ್ಥೆ, ಸ್ವತಂತ್ರ ಸಾಮ್ರಾಜ್ಯದ ಬಗ್ಗೆ ನಿಜಾಮರ ದುರಾಡಳಿತ, ಮತ್ತು ಸ್ವಾತಂತ್ಯ್ರ ಆಂದೋಲನದ ಪಕ್ಷಿನೋಟವನ್ನು ನೀಡಿದ್ದಾರೆ.
ನಿಜಾಂ ಹಾಗೂ ಈಸ್ಟ್ ಇಂಡಿಯಾ ಕಂಪನಿ ಹಾಗೂ ಕ್ರಿ.ಶ. 1724 ರಲ್ಲಿ ಹೈದರಾಬಾದ್ ಸಂಸ್ಥಾನದ ಹುಟ್ಟು, ಸಂಸ್ಥಾನದ ವಿಲಿನೀಕರಣ ಹಾಗೂ ಮಹಾತ್ಮ ಗಾಂಧೀಜಿ ,ಮತ್ತು ಹಲವು ನಾಯಕರ ಪಾತ್ರಗಳ ಬಗ್ಗೆ ಚರ್ಚಿಸುವ ಕೃತಿ ’ ಹೈದರಾಬಾದ ಸಂಸ್ಥಾನದಲ್ಲಿನ ಚಾರಿತ್ರಿಕ ಸ್ವಾತಂತ್ಯ್ರಾಂದೋಲನ’.
©2024 Book Brahma Private Limited.