ಪೈಗಂಬರ ಮಹಮ್ಮದನು

Author : ಸಿ.ಕೆ.ವೆಂಕಟರಾಮಯ್ಯ

Pages 185

₹ 1.00




Year of Publication: 1930
Published by: ಸತ್ಯ ಶೋಧನ ಪುಸ್ತಕ ಭಂಡಾರ

Synopsys

ಪೈಗಂಬರ ಮಹಮ್ಮದನು ಎಂಬ ಪುಸ್ತಕವು ಸಿ.ಕೆ ವೆಂಕಟರಾಮಯ್ಯ ಅವರ ಕೃತಿಯಾಗಿದೆ. ಈ ಪುಸ್ತಕದಲ್ಲಿ ಹಿಂದುಗಳೂ ಮಹಮ್ಮದೀಯರೂ ಬಹು ಕಾಲದಿಂದ ಇಂಡಿಯ ದೇಶದಲ್ಲಿ ಒಟ್ಟಿಗಿದ್ದರೂ ಅವರಲ್ಲಿ ಐಕಮತ್ಯವು ಅಷ್ಟಾಗಿ ಸೆಲೆಗೊಳ್ಳ ದಿರುವುದು ಶೋಚನೀಯವಾದ ವಿಜಯ, ಆದರೂ, ಅನ್ಯರಾಗಿ ಕೇವಲ ಮೈತ್ರೀ ಭಾವದಿಂದ ವರ್ತಿಸುತ್ತಿರುವವರನೇಕರು ಈ ಎರಡು ಪಂಗಡದವರಲ್ಲಿಯೂ ಇಲ್ಲದೆ ಇಲ್ಲ. ಉಳಿದವರಲ್ಲಿ ಅನೇಕರ ಹೃದಯ ಗಳು ವೀಣಾ ನಾದದಂತೆ ಶ್ರುತಿಗೊಂಡು ಸ್ನೇಹದ ಮುಧುರ ತಾಸ ಇನ್ನೂ ಸಿದ್ಧವಾಗಿಲ್ಲ. ಮಹಮ್ಮದೀಯರ ಮತ ಧರ್ಮಗಳ ಸಾರ ವನ್ನು ಹಿಂದುಗಳೂ, ಸನಾತನ ಧರ್ಮದ ಸಾರವನ್ನು ಮಹಮ್ಮದೀ ಯರೂ ಅರಿತುಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಈ ಎಲ್ಲ ವಿಚಾರಗಳನ್ನು ಲೇಖಕರು ಈ ಪುಸ್ತಕದಲ್ಲಿ ಹೊರತಂದಿದ್ದಾರೆ.

About the Author

ಸಿ.ಕೆ.ವೆಂಕಟರಾಮಯ್ಯ
(10 December 1896 - 03 April 1973)

ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ 1896ರ  ಡಿಸೆಂಬರ್ 10 ರಂದು ಜನಿಸಿದ ಸಿ.ಕೆ.ವೆಂಕಟರಾಮಯ್ಯ ಅವರು ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ.ಅವರ ಪುತ್ರರು. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ, ಮುಂಬಯಿಯಲ್ಲಿ ಎಂ.ಎ,  ಹಾಗೂ ಎಲ್.ಎಲ್.ಬಿ ಪದವಿ ಪಡೆದರು. ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ, ನಂತರ  ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ, ತದನಂತರ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು. ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ, ಮತ್ತು  ಭಾಸ ಹಾಗೂ ಕಾಳಿದಾಸರ ಕೃತಿಗಳ ಬಗೆಗೆ ವಿಮರ್ಶೆ ಬರೆದಿದ್ದಾರೆ. ಬುದ್ಧ, ಪೈಗಂಬರ, ಲಿಂಕನ್, ...

READ MORE

Related Books