ಹಿಂದೂ ಧರ್ಮೋತ್ತರ ಭಾರತ

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 257

₹ 180.00




Published by: ಲಡಾಯಿ ಪ್ರಕಾಶನ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಆಂಧ್ರಪ್ರದೇಶದಲ್ಲಿ ಹಲವು ವರ್ಷಗಳ ಕಾಲ ದಲಿತ, ಬಹುಜನ, ಶೂದ್ರರೊಟ್ಟಿಗೆ ಕೆಲಸ ಮಾಡಿದ ಕಾಂಚ ಐಲಯ್ಯ ಅವರು ರಚಿಸಿದ ಕೃತಿಯನ್ನು ಬಾಜಿ ದೇವೇಂದ್ರಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ದಲಿತ ಸಮುದಾಯದವರು ತಮ್ಮ ಜ್ಞಾನಮೂಲವನ್ನು ದೇಶಕ್ಕೆ ನೀಡಿದರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. 

ದುಡಿಯುವ ವರ್ಗಗಳ ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಸಾಮಾಜಿಕ, ತತ್ವಶಾಸ್ತ್ರ, ಧಾರ್ಮಿಕ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಸಾಮಾನ್ಯ ಸೂತ್ರಗಳ ತಳಹದಿ ಮೇಲೆ ಕೃತಿ ರಚನೆಗೊಂಡಿದೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books