ಡಾ. ವಿಜಯ್ ಪೂಣಚ್ಚ ತಂಬಂಡ ಅವರು ರಚಿಸಿರುವ ’ಕೆಳವರ್ಗದ ಪ್ರತಿಭಟನೆ ಸಬಾಲ್ಟರ್ನ್ ಚರಿತ್ರೆ ’ ಪುಸ್ತಕವು ಕೆಳವರ್ಗದ ಸಂವೇದನೆ ಮತ್ತು ಪ್ರತಿಭಟನೆಗಳನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಚರಿತ್ರೆಯ ಕ್ರಮವನ್ನು ಪರಿಚಯಿಸುತ್ತದೆ.
ದಕ್ಷಿಣ ಏಷಿಯಾದಲ್ಲಿ ಸಬಾಲ್ಟರ್ನ್ ಅಧ್ಯಯನದ ಹುಟ್ಟು ಮತ್ತು ವಿಕಾಸದ ಕುರಿತು ಪರಿಚಯಿಸುವ ಬರಹಗಳು ಮತ್ತು ಸಬಾಲ್ಟರ್ನ್ ಅಧ್ಯಯನ ಕ್ರಮದ ಮೇಲಿನ ಕೆಲವು ವಿಮರ್ಶೆಗಳ ಬಗ್ಗೆ, ಮತ್ತು ಆಂಟೋನಿಯೋ ಗ್ರಾಂಸಿ ಜೀವನ, ರಾಜಕೀಯ ಮತ್ತು ಸಿದ್ದಾಂತಗಳ ಬಗ್ಗೆಯೂ ಒಳನೋಟಗಳ ವಿವರಣೆಗಳನ್ನು ನೀಡುತ್ತದೆ.
ಭಾರತದ ಬಹುಸಂಖ್ಯಾತ ರೈತರ, ಜನಸಾಮಾನ್ಯರ ಸಂವೇದನೆ ಮತ್ತು ಪ್ರತಿಭಟನೆಗಳು ಯುರೋಪಿಯನ್ ಕೇಂದ್ರಿತ ವಿದ್ವತ್ ವಲಯಗಳು ರೂಪಿಸಿದ ಬೌದ್ಧಿಕತೆಗೆ ಅಥವಾ ಸಿದ್ಧಾಂತಗಳಿಗೆ ಸಾಧ್ಯವಾಗಿಲ್ಲ ಎಂಬುದನ್ನು ಸಬಾಲ್ಟರ್ನ್ ಅಧ್ಯಯನವು ನಿರೂಪಿಸುತ್ತದೆ.
©2024 Book Brahma Private Limited.