ತಾರೀಖೆ-ಇಸ್ಕಂದರಿ

Author : ವಿಠಲರಾವ್ ಟಿ. ಗಾಯಕ್ವಾಡ್

Pages 94

₹ 60.00




Year of Publication: 2000
Published by: ಪ್ರಸರಾಂಗ, ಹಂಪಿ ವಿಶ್ವವಿದ್ಯಾಲಯ
Address: ಪ್ರೊ. ಎ ವಿ ನಾವಡ ನಿರ್ದೇಶಕರು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲು, ಹಂಪಿ ವಿದ್ಯಾರಣ್ಯ ಕರ್ನಾಟಕ - 583276

Synopsys

’ತಾರೀಖೆ ಇಸ್ಕಂದರಿ’  ಕೃತಿಯು ಆದಿಲಶಾಹಿ ಮನೆತನದ ಎಂಟನೆಯ ರಾಜ ಸಿಕಂದರ್ ಆದಿಲಶಾನನ್ನು ಕುರಿತದ್ದು. ಇದರಲ್ಲಿ ಬರುವ ಖವಾಸಖಾನ್ ಎಂಬ ಅಧಿಕಾರಿಯ ಅವ್ಯವಸ್ಥೆ, ಶತ್ರು ಪಕ್ಷವಾದ ಮರಾಠರ ವ್ಯಕ್ತಿತ್ವ ಮತ್ತು ಹೋರಾಟ ಪ್ರವೃತ್ತಿ, ಶಿವಾಜಿ ರಾಜನ ಚಟುವಟಿಕೆಗಳೆಲ್ಲವನ್ನು ನಿರಾಕರಣ, ದ್ವೇಷದ ನೆಲೆಯಿಂದ ಕಂಡಿದ್ದರೂ ಅದೆಲ್ಲವನ್ನು ಈ ಕೃತಿಯಲ್ಲಿ ಚಿತ್ತಿಸಲಾಗಿದೆ. ಖವಾಸಖಾನನ ಅದಿಕಾರದಾಹ ಮತ್ತು ಅಪ್ರಾಮಾಣಿಕತೆ ಸಮೃದ್ಧ ಸಾಮ್ರಾಜ್ಯದ ಪತನಕ್ಕೆ ಕಾರಣವಾದದ್ದನ್ನು ಚಿತ್ರಿಸಲಾಗಿದೆ. ಮೂಲ ಪರ್ಶಿಯನ್ ಭಾಷೆಯಿಂದ ಮರಾಠಿಗೆ ಮು.ಮ. ಜಗತಾಪ್ ಅನುವಾದಿಸಿದ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ ಡಾ. ವಿಠಲರಾವ್ ಗಾಯಕ್ವಾಡ್ ಅನುವಾದ ಮಾಡಿದರು. 

About the Author

ವಿಠಲರಾವ್ ಟಿ. ಗಾಯಕ್ವಾಡ್
(22 July 1960)

ಡಾ.ವಿಠಲರಾವ್ ಟಿ. ಗಾಯಕ್ವಾಡ್ ಅವರು ಮೂಲತಃ ಬಳ್ಳಾರಿಯವರು. 22-07-1960ರಂದು ಜನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ, ಭಾಷಾಂತರ ಅಧ್ಯಯನ, ಮರಾಠಿ ಮತ್ತು ಇಂಗ್ಲಿಷಿನಿಂದ ಕೃತಿಗಳ ಭಾಷಾಂತರ, ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ) ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಲಜ್ಜಾಗೌರಿ (ಅನುವಾದ), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ, ...

READ MORE

Related Books