ಕಯ್ಯೂರಿನ ರೈತರ ಹೋರಾಟದ ಭಾಗವೇ ಈ ಕೃತಿಯಾಗಿದೆ. ಕಯ್ಯೂರು ಇರುವುದು ಕೇರಳದಲ್ಲಿ. ನಿರಂಜನ ಅವರು ಬರೆದಿರುವ ಚಿರಸ್ಮರಣೆ ಕಾದಂಬರಿಯು ಘಟಿಸುವುದು ಕಯ್ಯೂರಿನಲ್ಲಿ. ಈ ಕೃತಿಯಲ್ಲಿ ಚಿರಸ್ಮರಣೆಯನ್ನು ಬರೆದ ಲೇಖಕರೇ ಹಲವು ವರ್ಷಗಳ ಕಾಲ ತಾವು ಕಂಡ, ಕಯ್ಯೂರಿನ ರೈತ ವೀರರ ವಿಚಾರಣೆಯನ್ನು ಖುದ್ದು ಹಾಜರಿದ್ದು ನೋಡಿದ, ಪತ್ರಿಕೆಗಳಿಗೆ ವರದಿ ಮಾಡಿದ, ಕಯ್ಯೂರು ರೈತರ ಮರಣದಂಡನೆ ತಪ್ಪಿಸಲು ಸಹಿ ಸಂಗ್ರಹ ನಡೆಸಿದ ಅನುಭವವನ್ನ ದಾಖಲು ಮಾಡಿದ್ದರು. ಇಂದಿನ ಪೀಳಿಗೆಯವರು ಓದಲೇಬೇಕಾದ ಪುಸ್ತಕವಿದು.
©2025 Book Brahma Private Limited.