ಇತಿಹಾಸದಲ್ಲಿ ಮರೆಮಾಚಿರುವ ಡಾ.ಅಂಬೇಡ್ಕರ್ ಅವರ ಸಾಧನೆಗಳನ್ನು ಲೇಖಕರು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಕೃತಿಯಲ್ಲಿ ಮೂರು ಭಾಗಗಳಿವೆ. ನಾಗವಂಶದ ಚರಿತ್ರೆ, ಮುಚ್ಚುತ್ತಿರುವ ದಲಿತರ ಪ್ರಗತಿಯ ಬಾಗಿಲುಗಳು, ಕರ್ನಾಟಕ ಚರಿತ್ರೆಯಲ್ಲಿ ಅಲಕ್ಷಿತ ದಲಿತ ವಂಶದ ರಾಜರುಗಳು, ಚಾಳುಕ್ಯ ಚಕ್ರವರ್ತಿಗಳು ಹೊಲೆಯರು, ಕದಂಬರು ಮಾದಿಗ ವಂಶಸ್ಥರು, ರಾಷ್ಟ್ರಕೂಟರೂ ಕೂಡ ದಲಿತರೆ, ಬೌದ್ಧ ಧರ್ಮದ ವಿರುದ್ಧ ಬ್ರಾಹ್ಮಣರ ಯುದ್ಧ ಹೀಗೆ ಹಲವು ಅಧ್ಯಾಯಗಳನ್ನು ಒಳಗೊಂಡಿದೆ. ಸೇವೆದಾಸಿ, ದೇವದಾಸಿ, ಹರಿಜನ ಪದಗಳು ಬೆಳೆದು ಬಂದ ಹಿನ್ನೆಲೆ ಬಗ್ಗೆಯೂ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2025 Book Brahma Private Limited.