`ದೇಶ ವಿಭಜನೆಯ ದುರಂತ ಕಥೆ' ರಾಷ್ಟ್ರೀಯ ವಿಚಾರ ಬರಹಗಳ ಇಂಗ್ಲಿಷ್ ಸಂಕಲನವನ್ನು ಲೇಖಕ ಹೊ.ವೆ. ಶೇಷಾದ್ರಿ ಅವರು ರಚಿಸಿದ್ದಾರೆ. ಲೇಖಕ ನಾಗರಾಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1947ರಲ್ಲಿ ದೇಶ ವಿಭಜನೆ ಅನಿವಾರ್ಯವಾಗಿತ್ತೇ? ದುಃಖಪೂರ್ಣವಾದ ಭಾರತ ವಿಭಜನೆಯು ಮುಂದಿನ ಪೀಳಿಗೆಗೆ ನೀಡುವ ಪಾಠಗಳೇನು? ಚರಿತ್ರೆಯು ಪುನರಾರ್ವತನೆಯಾಗದಂತೆ ಮಾಡುವ, ನಮ್ಮ ನಾಯಕರನ್ನು ಎಚ್ಚರಗೊಳಿಸುವ ಏನಾದರೂ ಸಂಗತಿಗಳುಂಟೇ?- ಮುಂತಾದ ಅಂಶಗಳನ್ನು ಸಮಾಧಾನವಾಗಿ ವಿವರಿಸಲಾಗಲೀ, ತರ್ಕಬದ್ಧವಾಗಿ ಉತ್ತರಿಸಲಾಗಲೀ ಇದುವರೆಗೆ ಯತ್ನಿಸಲಾಗಿಲ್ಲ ಎನ್ನಬೇಕಾಗುತ್ತದೆ. ಬಹುಕಾಲದಿಂದಲೂ ಅಪೂರ್ಣವಾಗಿ ಉಳಿದಿದ್ದ ಕೊರತೆಯೊಂದನ್ನು ಈ ಪುಸ್ತಕವು ಪೂರೈಸುತ್ತದೆ. ನಮ್ಮ ಚರಿತ್ರೆಯ ಬಗೆಗೆ ಹೊಸ ಸಂಶೋಧನೆಗಳನ್ನು ನಡೆಸಲು ಇತಿಹಾಸ ಸಂಶೋಧಕರಿಗೆ ಪ್ರೇರಣೆ ನೀಡಬಲ್ಲದು; ಸರ್ವಸಾಮಾನ್ಯ ಜನರಿಗೆ ನಮ್ಮೀ ದೇಶದ ಅಖಂಡತೆಗೆ ಇಂದು ಒದಗಿರುವ ಅಪಾಯದ ಚಾರಿತ್ರಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿಯು ಅವಕಾಶ ಒದಗಿಸಿಕೊಟ್ಟೀತು.
©2025 Book Brahma Private Limited.