ಆದುನಿಕ ಭಾರತದ ಇತಿಹಾಸಕ್ಕೆ ಸಂಬಂಧಿಸಿ ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ ಇದು. ಪ್ರಾಚೀನ ಭಾರತದ ಇತಿಹಾಸ ಶ್ರೀಮಂತವಾಗಿದ್ದು, ಸಂಶೋಧನೆ ನಡೆಸಿದಷ್ಟು ಹೆಚ್ಚು ಹೆಚ್ಚು ವಿಷಯಗಳು ಗೋಚರವಾಗುತ್ತಿದೆ. ಆದರೆ, ಆಧುನಿಕ ಭಾರತವು ಸಹ ತನ್ನ ಒಡಲೊಳಗೆ ಅಧ್ಯಯನದ ಶಿಸ್ತಿಗೆ ಒಳಪಡುವ ಅಸಂಖ್ಯ ದಾಖಲೆ-ಪುರಾವೆಗಳನ್ನು ಹೊಂದಿದೆ. ಇವುಗಳ ಶಿಸ್ತೀಯ ಅಧ್ಯಯನ ಅಗತ್ಯದ ಭಾಗವಾಗಿ ಈ ಕೃತಿಯು ಮಹತ್ವದ ಸುಳಿವು-ಮಾಹಿತಿ ನೀಡುತ್ತದೆ. ವಿಶೇಷವಾಗಿ ಭಾರತಕ್ಕೆ ಬ್ರಿಟಿಷರ ಕೊಡುಗೆಗಳು, ಸ್ವಾತಂತ್ಯ್ರಾನಂತರದ ಭಾರತದ ಅಭಿವೃದ್ಧಿಯ ಇತಿಹಾಸವೂ ಈ ಕೃತಿ ಒಳಗೊಂಡಿದೆ.
©2025 Book Brahma Private Limited.