ಕನ್ನಡದ ಅತ್ಯುತ್ತಮ ವಿಮರ್ಶಕರಲ್ಲಿ ಜಿ.ಎಸ್. ಆಮೂರ ಒಬ್ಬರು. ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಓದುಗರಿಗೆ ಪರಿಚಯಿಸಿದವರಲ್ಲಿ ಪ್ರಮುಖರು. ಅವರ ಪ್ರಮುಖ ಕೃತಿಗಳು ಹೀಗಿವೆ: ಆಧುನಿಕ ಕನ್ನಡ ವಿಮರ್ಶೆ, ಮಹಾಕವಿ ಮಿಲ್ಟನ್, ಭುವನದ ಭಾಗ್ಯ, ಸೀಮೊಲ್ಲಂಘನ, ಶಾಂತಿನಾಥ ದೇಸಾಯಿ, ’Essays on modern Kannada literature’, ’Poetics of T.S.Eliot', 'Images and Impressions' ಇವರ ಪ್ರಮುಖ ಕೃತಿಗಳು.
’The Concept of Comedy' ಅವರ ಪಿಎಚ್‌ಡಿ ಮಹಾಪ್ರಬಂಧ. ’ಭುವನದ ಭಾಗ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಪಂಪ ಪ್ರಶಸ್ತಿ ಪಡೆದ ಅಪರೂಪದ ಲೇಖಕರಲ್ಲಿ ಒಬ್ಬರು.
ಅವರ ಬದುಕು ಬರಹ ಕುರಿತ ಈ ಕೃತಿಯನ್ನು ಕವಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ನವಕರ್ನಾಟಕ ಪ್ರಕಾಶನಕ್ಕಾಗಿ ರಚಿಸಿಕೊಟ್ಟಿದ್ದಾರೆ.
©2024 Book Brahma Private Limited.