ದೇವನೂರ ಮಹಾದೇವ ದಲಿತ ಸಂವೇದನೆಯನ್ನು ರೂಪಕಗಳಲ್ಲಿ ಕಟ್ಟಿಕೊಟ್ಟ ಬಹುದೊಡ್ಡ ಲೇಖಕ, ಚಿಂತಕ. ಹೋರಾಟ ಮತ್ತು ಸಂಘಟನೆ ಅವರ ಇನ್ನೊಂದು ಕ್ಷೇತ್ರ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಅವರೂ ಒಬ್ಬರು. ತಾವು ಕಂಡ ಸಮಾಜದ ಯಥಾರ್ಥ ಚಿತ್ರವನ್ನು ಯಾವುದೇ ಕೃತಕ ಅಲಂಕರಣವಿಲ್ಲದೆ, ಅತ್ಯಂತ ಸಮರ್ಥವಾಗಿ ಕೃತಿಗಳಲ್ಲಿ ಬಿಂಬಿಸಿದವರು. ಕಲಾತ್ಮಕತೆ ತುಂಬ ಸಹಜವಾಗಿ ಅವರ ಬರಹಗಳಲ್ಲಿ ಮೈದಳೆದಿದ್ದು ಅವರು ಕನ್ನಡ ಸಾಹಿತ್ಯ ಲೋಕದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಲೋಕದ ವಿಶಿಷ್ಟ ಲೇಖಕರೆನ್ನಿಸಿಕೊಂಡಿದ್ದಾರೆ. ’ಕುಸುಮಬಾಲೆ’ ಕೃತಿಗಾಗಿ 1990 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾಗಿರುವ ದೇವನೂರು ಮಹದೇವ ’ದ್ಯಾವನೂರು’, ’ಒಡಲಾಳ’, ’ಎದೆಗೆ ಬಿದ್ದ ಅಕ್ಷರ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ದೇವನೂರ ಮಹದೇವ ಅವರ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯನ್ನು ಹಿರಿಯ ಲೇಖಕರಲ್ಲಿ ಒಬ್ಬರಾದ ಎನ್.ಪಿ. ಶಂಕರನಾರಾಯಣ ರಾವ್ ರಚಿಸಿದ್ದಾರೆ.
©2024 Book Brahma Private Limited.