ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದಿತ್ತವರು ಪ್ರಸಿದ್ಧ ಸಾಹಿತಿ ಚಂದ್ರಶೇಖರ ಕಂಬಾರ. ನವ್ಯಕಾಲ ಘಟ್ಟದಲ್ಲಿಯೇ ಬದುಕಿದ್ದರೂ ತಮ್ಮ ವಿಭಿನ್ನ ಬರವಣಿಗೆಯಿಂದಾಗಿ ಅನನ್ಯ ಪಥದಲ್ಲಿ ಹೆಜ್ಜೆ ಇರಿಸಿದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡನಾಡಿನ ಹೆಮ್ಮೆ. ಅವರ ಕೃತಿಗಳಲ್ಲಿ ಬರುವ ’ಶಿವಾಪುರ’ ಎಂಬ ಕಾಲ್ಪನಿಕ ಊರನ್ನು ಯಾರು ತಾನೇ ಮರೆಯಲು ಸಾಧ್ಯ? ಕಂಬಾರರ ಮತ್ತೊಂದು ಆಸಕ್ತಿಯ ಕ್ಷೇತ್ರ ಸಿನಿಮಾ.’ಸಂಗ್ಯಾ ಬಾಳ್ಯಾ’, ’ಕಾಡು ಕುದುರೆ’ಯಂತಹ ಸಿನಿಮಾಗಳು ಅವರ ಸಿನಿ ಸಾಹಸಕ್ಕೆ ಸಾಕ್ಷಿಯಾಗಿವೆ. ಅವರ ’ಸಿರಿ ಸಂಪಿಗೆ’ ನಾಟಕಕ್ಕೆ 1991ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ’ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಲಿಕೆಯಡಿ ಲೇಖಕ ಬಸವರಾಜ ಮಲಶೆಟ್ಟಿ ಅವರು ಕಂಬಾರರನ್ನು ಪರಿಚಯಿಸಿದ್ದಾರೆ.
©2024 Book Brahma Private Limited.