ದಲಿತ ಸಾಹಿತ್ಯ ಮತ್ತು ಅದರ ಉತ್ತರೋತ್ತರ ಚರ್ಚೆಗಳು ಸಮಕಾಲೀನ ಸಾಹಿತ್ಯ ಮತ್ತು ಸಂಸ್ಕೃತಿ ಸಂದರ್ಭಗಳಲ್ಲಿ ನಡೆಯುತ್ತಿರುವಂತದ್ದು. ಈ ದೃಷ್ಟಿಯಿಂದ ದಲಿತ ಸ್ತ್ರಿ ಬರಹಗಾರರಾದ ಭಾಮಾ ಅವರ ಸಾಹಿತ್ಯ ಕೃಷಿ ಈ ಭಾಮಾ ದಲಿತ ಪ್ರಜ್ಞೆ ಕೃತಿಯಲ್ಲಿ ಸ್ಪಷ್ಟವಾಗುತ್ತದೆ.
ಇದರ ಮೂಲ ಬರಹಗಾರರಾದ ಆರ್ . ಕೆ ಧವನ್ ಮತ್ತು ಸುನಿತಾ ಪುರಿಯವರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು ವಿಮರ್ಶಕ ಡಾ. ಎಚ್.ಎಸ್. ನಾಗಭೂಷಣ. ಭಾಮಾ ಅವರು ದಲಿತ ಶೋಷಣೆಗಳನ್ನು ತಮ್ಮ ಸಾಹಿತ್ಯದಲ್ಲಿ ಕೇಂದ್ರಿಕರಿಸುತ್ತಾರೆ. ಶೋಷಣೆಯೇ ಪ್ರಧಾನವಾದ ಸಮುದಾಯಗಳಲ್ಲಿ ಶೋಷಣೆ ಎನ್ನುವುದು ಸಾಮಾನ್ಯ ಸಂಗತಿಯಾಗಿದೆ. ಈ ಶೋಷಣೆಯ ಸ್ವರೂಪವು ದಲಿತ ಎನ್ನುವ ಹಿನ್ನೆಲೆಯಲ್ಲಿ ನೋಡುವಾಗ ಭಾರತೀಯ ಸಮಾಜದಲ್ಲಿ ಇರುವ ಜಾತಿ ಪದ್ದತಿ, ಹೊರದೂಡುವಿಕೆಯ ಮನಃಸ್ಥಿತಿ ಇತ್ಯಾದಿಗಳಲ್ಲಿ ಕಾಣಬಹುದು. ಭಾಮಾ ಅವರ ಸಾಹಿತ್ಯದ ಹಿನ್ನಲೆಯಲ್ಲಿ ದಲಿತ ಸಂಕಥನಗಳ ವೈವಿಧ್ಯಮಯವಾದ ಅಂಶಗಳನ್ನು ಚರ್ಚಿಸಲಾಗಿದೆ.
©2024 Book Brahma Private Limited.