ಬಿ. ಪುಟ್ಟಸ್ವಾಮಯ್ಯನವರು ಪತ್ರಿಕೋದ್ಯಮ, ನಾಟಕ, ಕಾದಂಬರಿ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವ ಸಲ್ಲಿಸಿದವರು. ಅವರ ನಾಟಕಗಳು ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದವು. ರಂಗಭೂಮಿಯ ಚಟುವಟಿಕೆಗಳಿಗೆ ಶುದ್ಧ ಸಾಹಿತ್ಯದ ಸ್ಪರ್ಶವನ್ನೂ ತಂದು ಕೊಟ್ಟು ಹೊಸ ಆಯಾಮವನ್ನು ಮೂಡಿಸಿದ ಶ್ರೇಯಸ್ಸು ಪುಟ್ಟಸ್ವಾಮಯ್ಯನವರದ್ದು. ಬಸವಣ್ಣನವರ ಬದುಕು-ಬವಣೆ-ಸಾಧನೆಗಳನ್ನು ಕುರಿತಂತೆ ಅವರು ರಚಿಸಿದ ಕಾದಂಬರಿ ಮಾಲೆ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟಿದೆ. ಒಟ್ಟಿನಲ್ಲಿ ಮರೆಯಲಾಗದ ಮಹಾನುಭಾವರಲ್ಲಿ ಅವರು ಒಬ್ಬರಾಗಿದ್ದಾರೆ. 1964ರಲ್ಲಿ ಅವರ ‘ಕ್ರಾಂತಿ ಕಲ್ಯಾಣ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.
ಬಿ. ಪುಟ್ಟಸ್ವಾಮಯ್ಯನವರ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಕೃತಿ ಇದಾಗಿದ್ದು ಸಾಹಿತಿ ಕೃಷ್ಣಮೂರ್ತಿ ಹನೂರು ಕೃತಿಯ ಲೇಖಕರು.
©2024 Book Brahma Private Limited.