ಬಿ.ಸಿ. ರಾಮಚಂದ್ರ ಶರ್ಮ

Author : ಲಿಂಗದೇವರು ಹಳೆಮನೆ

Pages 112

₹ 80.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ನವ್ಯ ಕಾವ್ಯಮಾರ್ಗವನ್ನು ರೂಪಿಸಲು ಪ್ರಯತ್ನಿಸಿದವರು ಬಿ.ಸಿ ರಾಮಚಂದ್ರ. ‘ಹೃದಯಗೀತ’, ‘ಏಳುಸುತ್ತಿನ ಕೋಟೆ’, ‘ಬುವಿ ನೀಡಿದ ಸ್ಫೂರ್ತಿ’, ‘ಹೇಸರಗತ್ತೆ’, ‘ಬ್ರಾಹ್ಮಣ ಹುಡುಗ’, ‘ಮಾತು-ಮಾಟ’, ‘ದೆಹಲಿಗೆ ಬಂದ ಹೊಸ ವರ್ಷ’, ‘ಸಪ್ತಪದಿ’ ಅವರ ಪ್ರಮುಖ ಕವಿತಾ ಸಂಕಲನಗಳು.

’ಸಪ್ತಪದಿ’ ಕೃತಿಗೆ 1998ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಾಟಕ, ಕತೆಗಳು, ಅನುವಾದ ಪ್ರಕಾರಗಳಲ್ಲೂ ಕೆಲಸ ಮಾಡಿದ್ದಾರೆ. ’ನೆರಳು’ ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ’ಸೆರಗಿನ ಕೆಂಡ’ ಕೃತಿಗೆ ಅಖಿಲ ಭಾರತ ಬಹುಮಾನ ಲಭಿಸಿದೆ. ಮನಶಾಸ್ತ್ರ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ. 

ರಾಮಚಂದ್ರಶರ್ಮರ ಬಾಲ್ಯ, ಅವರ ಸಾಹಿತ್ಯ ಕೃಷಿ, ಸಾಧನೆಗಳನ್ನು ಕುರಿತ ದಟ್ಟ ವಿವರಗಳು ಈ ಕೃತಿಯಲ್ಲಿವೆ. 

About the Author

ಲಿಂಗದೇವರು ಹಳೆಮನೆ
(06 March 1949 - 08 June 2011)

ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲಿಂಗದೇವರು ಹಳೆಮನೆ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಲುಗೊಣದವರು. 1949ರ ಮಾರ್ಚ್‌ 6ರಂದು ಜನಿಸಿದ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರು ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕರಾಗಿದ್ದ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹಾಮಾನಾ ಪ್ರಶಸ್ತಿ, ಕೆ.ವಿ. ಸುಬ್ಬಣ್ಣ ನಾಟಕ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಚಿಕ್ಕದೇವಭೂಪ, ಹೈದರ್, ಅಂತೆಂಬರ ಗಂಡ, ತಸ್ಕರ, ಶಾಪ, ಡಾ.ಬೇಥೂನ್‌, ಮಟಾಶ್‌ರಾಜ, ಧರ್ಮಪುರಿಯ ದೇವದಾಸ, ಮದರ್ ಕರೇಜ್‌, ಮನುಷ್ಯ ಅಂದ್ರೆ ಮನುಷ್ಯನೇ (ನಾಟಕಗಳು), ಕನ್ನಡ ಕಲಿ, ಭಾಷೆ, ಭಾಷೆ ...

READ MORE

Related Books