About the Author

ಕವಿ ,ಲೇಖಕ ರಾ.ಹ.ಕೊಂಡಕೇರ(ರಾಮಪ್ಪ ಹಣಮಪ್ಪ ಕೊಂಡಕೇರ) ತಂದೆ ಹಣಮಪ್ಪ ,ತಾಯಿ ರಂಗವ್ವ . ಇವರು 8-6-1988 ರಂದು ಜನಿಸಿದರು.ಮೂಲತಃ ಇವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಎಂಬ ಗ್ರಾಮದವರು. ಪ್ರಸ್ತುತ ಇವರು ಧಾರವಾಡದಲ್ಲಿ ರೈಲ್ವೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಡು ಹಲವಾರು ಮೌಲಿಕ ಕೃತಿಗಳನ್ನೂ ಹೊರತಂದಿದ್ದಾರೆ. ನಾಟಕ ರಚನೆ ಅಭಿನಯದ ಜೊತೆಗೆ ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. 

ಕೃತಿಗಳು : ಹಕ್ಕಿ ಚುಕ್ಕಿ,ಮನದ ಮಾತು(ಹನಿಗವಿತೆಗಳು),ಶ್ರೀ ಲಕ್ಷ್ಮೀ ರಂಗನಾಥನ ಚರಿತ್ರೆ (ಸಂಶೋಧನಾ ಗ್ರಂಥ),ಮೆಟ್ಟಿನ ಪದಗಳು(ಸಂಪಾದಿತ ಕೃತಿ)ಇವು ಪ್ರಕಟಣೆಗೊಂಡಿವೆ. ಶ್ರೀರಂಗನ ಮಹಿಮೆ,ಹಲಗಲಿಯ ಬೇಡರು,ಸರಕಾರಿ ಶಾಲೆ(ನಾಟಕಗಳು) ಬಡ್ಡಿ ಬೋರವ್ವ(ಕಥಾಸಂಕಲನ) 

ಪ್ರಶಸ್ತಿ,ಪುರಸ್ಕಾರಗಳು:  ಉತ್ತಮ ಪುಸ್ತಕ ಪ್ರಶಸ್ತಿ , " ಸಾಹಿತ್ಯ ರತ್ನ" ಪ್ರಶಸ್ತಿ ಇತ್ಯಾದಿ.

 

 

ರಾ.ಹ.ಕೊಂಡಕೇರ