ವೈದೇಹಿ

Author : ಸ. ಉಷಾ

Pages 92

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಅಂಚೆಪಟ್ಟಿಗೆ ಸಂಖ್ಯೆ:5159 ಬೆಂಗಳೂರು-560 001
Phone: (080-22203580/01/02)

Synopsys

ಕನ್ನಡ ಸಾರಸ್ವತ ಜಗತ್ತನ್ನು ಸಮೃದ್ಧಗೊಳಿಸಿದ ಮಹಿಳಾ ಸಾಹಿತಿಗಳಲ್ಲಿ ’ವೈದೇಹಿ’ ಅಗ್ರಗಣ್ಯರು. ಜಾನಕಿ ಶ್ರೀನಿವಾಸಮೂರ್ತಿ ಅವರ ನಿಜನಾಮ. ಕರಾವಳಿಯ ಬದುಕು ಮತ್ತು ಸ್ತ್ರೀಪರ ಧ್ವನಿ ಅವರ ಸೃಜನಶೀಲತೆಯ ಶಕ್ತಿಕೇಂದ್ರ. 

’ಮರ ಗಿಡ ಬಳ್ಳಿ’, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿ, ಅಂತರಂಗದ ಪುಟಗಳು, ಗೋಲ, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಇವರ ಪ್ರಮುಖ ಕಥಾ ಸಂಕಲನಗಳು. ಬಿಂದು ಬಿಂದಿಗೆ, ಹೂವಕಟ್ಟುವ ಕಾಯಕ’, ’ಪಾರಿಜಾತ’ ಕವಿತೆಗಳ ಗುಚ್ಛ. ಮಲ್ಲಿನಾಥನ ಧ್ಯಾನ ಅವರ ಲೇಖನ ಸಂಕಲನಗಳಲ್ಲಿ ಪ್ರಮುಖವಾದುದು.  ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಮತ್ತಿತರ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ’ಗುಲಾಬಿ ಟಾಕೀಸು’ ’ಅಮ್ಮಚ್ಚಿಯೆಂಬ ನೆನಪು’ ಕತೆಗಳು ಸಿನಿಮಾ ಆಗಿವೆ. 

'ಕ್ರೌಂಚ ಪಕ್ಷಿಗಳು' ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ನವಕರ್ನಾಟಕ ಪ್ರಕಾಶನಕ್ಕಾಗಿ ಅವರ ಬದುಕನ್ನು ಚಿತ್ರಿಸಿಕೊಟ್ಟಿದ್ದಾರೆ ಲೇಖಕಿ ಸ. ಉಷಾ. 

About the Author

ಸ. ಉಷಾ

ಮೈಸೂರಿನಲ್ಲಿ 1954 ಏಪ್ರಿಲ್ 05ರಂದು ಜನಿಸಿದ ಇವರು ಎಂ.ಎ ಪದವಿಧರರಾಗಿದ್ದು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಾಧ್ಯಾಪಕವೃತ್ತಿಯಿಂದ ನಿವೃತ್ತರಾಗಿದ್ದು, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯತ್ವರಾಗಿದ್ದರು. ತೊಗಲುಗೊಂಬೆಯ ಆತ್ಮಕತೆ, ಈ ನೆಲದ ಹಾಡು, ಹವಳ ದಾರಿ ಹೊತ್ತು ಇವರ ಕವನ ಸಂಕಲನವಾಗಿದೆ. ‘ಈ ನೆಲದ ಹಾಡು’ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ತೊಗಲುಗೊಂಬೆಯ ಆತ್ಮಕತೆಗೆ ವರ್ಧಮಾನ ಉದಯೋನ್ಮುಖ ಲೇಖಕರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books