ಮೈಸೂರಿನ ಹುಲಿ ಎಂದೇ ಪ್ರಸಿದ್ದನಾದ, ಅಪ್ರತಿಮ ದೇಶಭಕ್ತ, ಸ್ವಾಭಿಮಾನಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಸ್ವಾಭಿಮಾನದ ಆಶಾಕಿರಣ, ಇಂದನ ಹೋರಾಟಗಳಿಗೆ ಬೆಳಕಾಗಬೇಕಿದ್ದ ಟಿಪ್ಪುಸುಲ್ತಾನನನ್ನು ಇಂದು ರಾಜಕೀಯಕಾರಣಕ್ಕಾಗಿ ವಿವಾದದ ಕೇಂದ್ರವನ್ನಾಗಿಸಿದ್ದು ದೇಶದ ದುರಂತಗಳಲ್ಲೊಂದು. ಇಂತಹ ಸಂದಂರ್ಭದಲ್ಲಿ ಟಿಪ್ಪುಸುಲ್ತಾನನನ್ನು ಮತ್ತೆ ಮತ್ತೆ ಸ್ಮರಿಸುವಂತಹ, ಅವನು ದೇಶಕ್ಕೆ ನೀಡಿದ ಕಾಣಿಕೆಗಳನ್ನು ಗುರುತಿಸುವ ಕೆಲಸ ಜನಸಾಮಾನ್ಯರಲ್ಲಿ ಆಗಬೇಕಿದೆ. ಈ ದೃಷ್ಠಿಯಿಂದ ’ಟಿಪ್ಪು ನಾಡಿನ ಪ್ರಸ್ತುತ’ ಕೃತಿಯು ಪ್ರಮುಖವಾಗಿದೆ.
ಕೃತಿಯು ನಾಲ್ಕು ಭಾಗಗಳನ್ನೊಳಗೊಂಡಿದ್ದು, ಮೊದಲನೆಯ ಭಾಗ 18ನೇ ಶತಮಾನದ ರಾಜಕಾರಣ, ಹೈದರಾಲಿ ಅಧಿಕಾರಾವಧಿಯನ್ನು ಚಿತ್ರಿಸುತ್ತದೆ. ಎರಡನೆಯ ಭಾಗದಲ್ಲಿ ಟಿಪ್ಪು ಜೀವನ ವೃತ್ತಾಂತ, ಟಿಪ್ಪುವಿನ ದಿಗ್ವಿಜಯಗಳು, ವಿದೇಶಿಯರೊಂದಿಗೆ ಸಂಬಂಧಗಳು, ಟಿಪ್ಪೂ ವಿರುದ್ಧ ಒಕ್ಕೂಟ ರಚನೆ, ಮೂರನೇ ಮತ್ತು ನಾಲ್ಕನೇ ಮೈಸೂರು ಯುದ್ಧ, ಶ್ರಿರಂಗಪಟ್ಟಣದ ಪತನಕ್ಕೆ ಕಾರಣಗಳನ್ನು ವಿವರಿಸಲಾಗಿದೆ. ಮೂರನೇಯ ಭಾಗದಲ್ಲಿ ಟಿಪ್ಪುವಿನ ಆಡಳಿತ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಸಾಹಿತಿ ಮತ್ತು ಕಲಾವಿದರ ಕಣ್ಣಲ್ಲಿ ಟಿಪ್ಪು ಹೇಗೆ ಕಾಣುತ್ತಾನೆ ಎಂಬ ವಿವರಗಳಿವೆ.
©2024 Book Brahma Private Limited.