ಶಾಲಾ ಶಿಕ್ಷಣ ಪಠ್ಯ ಪುಸ್ತಕಕ್ಕೆ ಅಷ್ಟೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಹೊರ ಹಾಕಲು ಪತ್ಯೇತರ ಚಟುವಟಿಕೆಗಳನ್ನು ಆಯೋಜಿಸಬೇಕು. ವಿದ್ಯಾರ್ಥಿಗಳಿಗೆ ಮನೋರಂಜನ ಕಾರ್ಯಕ್ರಮಗಳು, ಆಟೋಟಗಳು, ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ವಿದ್ಯಾರ್ಥಿಗಳು ಪತ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕಿ ಅದರ ಅನುಭವವನ್ನು ಜೀವಿಸಿದಾಗ ಅವರ ಆಲೋಚನಾ ಶಕ್ತಿಯ ಗುಣಮಟ್ಟ ಹೆಚ್ಚುತ್ತದೆ, ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕವಾದ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರ ತರುವ ಪ್ರಯತ್ನ ಶಾಲೆಯಿಂದ ಆಗಬೇಕು ಎಂಬುದು ನನ್ನ ಮನವಿ. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಮನೋರಂಜನೆಗೆ ಈ ಒಂದು ಕಿರುಹಾಸ್ಯ ನಾಟಕವನ್ನು ಕಟ್ಟಿದ್ದೇನೆ. ವಿದ್ಯಾರ್ಥಿಗಳೆಲ್ಲಾ ತರ್ಲೆಗಳಾದರೆ, ಆ ಶಾಲೆಯ ಶಿಕ್ಷಕ/ಶಿಕ್ಷಕಿಯರು ಪಡುವ ಪಾಡು, ಅವರ ನಡುವೆ ನಡೆಯುವ ಮಾತಿನ ಚಕಮಕಿ, ಇವೆಲ್ಲವನ್ನು ಕೂಡಿಸಿ ಕಥೆಯನ್ನು ಸೃಷ್ಟಿಸಿದ್ದೇನೆ. ಈ ನಾಟಕವು ಮನೋರಂಜನೆಗೆ ಅಷ್ಟೇ ಸೀಮಿತವಾಗಿದ್ದು, ನಾಟಕಾಭಿಲಾಷಿಗಳು ಇದನ್ನು ಮೆಚ್ಚುವರು ಎಂದು ನಂಬಿದ್ದೇನೆ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.