ಧೀರೋದ್ದಾತ್ತ ಹೋರಾಟದ ಇತಿಹಾಸವಿರುವ ಭಾರತ ಸ್ವಾತಂತ್ಯ್ರ ಚರಿತ್ರೆ, ಸ್ವಾತಂತ್ಯ್ರೋತ್ತರ ಭಾರತದ ಕುರಿತು ಪೂರ್ಣ ಚಿತ್ರಣ ನೀಡುವ ಕೃತಿ 'ಸ್ವಾತಂತ್ಯ್ರೋತ್ತರ ಭಾರತ'.
ಇತಿಹಾಸ ಅಧ್ಯಾಪಕರಾದ ಪ್ರೊ.ಬಿಪಿನ್ ಚಂದ್ರ, ಪ್ರೊ. ಮೃದುಲಾ ಮುಖರ್ಜಿ ಹಾಗೂ ಪ್ರೊ. ಆದಿತ್ಯ ಮುಖರ್ಜಿ ಅವರ ಈ ಕೃತಿಯನ್ನು ಸಿ.ಬಿ. ಕಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಸ್ವಾತಂತ್ಯ್ರೋತ್ತರ ಭಾರ” ಕೃತಿಯು ಹಲವಾರು ವಿಶೇಷತೆಗಳಿಂದ ಕನ್ನಡ ಪುಸ್ತಕಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. 1857ರ ಸ್ವಾತಂತ್ಯ್ರ ಸಂಗ್ರಾಮದಿಂದ ಮೊದಲುಗೊಂಡು 1947ರವರೆಗೆ ಭಾರತದಲ್ಲಿ ನಡೆಸ ಸ್ವಾತಂತ್ಯ್ರ ಹೋರಾಟದ ಕುರಿತು ಹಲವಾರು ಕೃತಿಗಳು ಬಂದಿವೆ. ಅದರಲ್ಲಿ ಸ್ವಾತಂತ್ಯ್ರ ನಂತರದ ಭಾರತದ ಬಗ್ಗೆ ಸಂಕ್ಷಿಪ್ತ ವಿವರ ಒದಗುತ್ತಿತ್ತು. ಆದರೆ ಈ ಕೃತಿಯು ಸ್ವಾತಂತ್ಯ್ರೋತ್ತರ ಭಾರತದ ಪರಿಸ್ಥಿತಿಯನ್ನು ಸುದೀರ್ಘ ಅಧ್ಯಯನದಿಂದ ರಚಿಸಿರುವ ಕೃತಿಯಾಗಿದೆ.
ಈ ಕೃತಿಯು ಕೇವಲ ರಾಜಕೀಯ ನೆಲೆಗಟ್ಟಿನಲ್ಲಿ ಮಾತ್ರ ರಚಿತವಾಗಿಲ್ಲ. ಮುಖ್ಯವಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಶ್ಲೇಷಣೆ ಹಾಗೂ ವಸಹಾತುಶಾಹಿಯಿಂದ ಬಂಡವಾಳಶಾಹಿ ಪ್ರಭುತ್ವದೆಡೆಗಿನ ಪಯಣ, ಜಾತಿ ವ್ಯವಸ್ಥೆ ಮತ್ತು ಕೋಮುವಾದದ ಕುರಿತು ಚರ್ಚಿಸಿರುವುದು ಇಂದಿನ ಪ್ರಸ್ತುತ ಭಾರತವನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.
ಕೃತಿಯು ವಸಾಹತುಶಾಹಿ ಪರಂಪರೆ, ರಾಷ್ಟ್ರೀಯ ಆಂದೋಲನ ಮತ್ತು ಅದರ ಪರಂಪರೆ, ಸಂವಿಧಾನದ ವಿಕಾಸ ಮತ್ತು ಅದರ ಮುಖ್ಯ ಲಕ್ಷಣಗಳು, ಸಂವಿಧಾನ ಸಂರಚನೆ, ಒಂದು ರಾಷ್ಟ್ರವಾಗಿ ಭಾರತದ ಬಲಸಂವರ್ಧನೆ, ವಿದೇಶಾಂಗ ನೀತಿ: ನೆಹರೂ ಯುಗ, ಇಂದಿರಾ ಗಾಂಧಿ ವರ್ಷಗಳು. ಜೆ.ಪಿ. ಆಂದೋಲನ ಮತ್ತು ತುರ್ತು ಪರಿಸ್ಥಿತಿ: ಭಾರತೀಯ ಪ್ರಜಾಪ್ರಭುತ್ವದ ಸತ್ವಪರೀಕ್ಷೆ, ಜನತಾ ಆಳ್ವಿಕೆ ಮತ್ತು ಇಂದಿರಾ ಪುನರಾಗಮನ, ಹೊಸ ಸಹಸ್ರಮಾನದತ್ತ ಮುನ್ನಡೆ ಹಾಗೂ ನಂತರದ ಬೆಳವಣಿಗೆಗಳು, ರಾಜ್ಯಗಳಲ್ಲಿ ರಾಜಕಾರಣ, ಭಾರತೀಯ ಅರ್ಥವ್ಯವಸ್ಥೆ, 1991ರ ನಂತರ ಆರ್ಥಿಕ ಸುಧಾರಣೆಗಳು, ಭೂ ಸುಧಾರಣೆಗಳು, ಕೋಮುವಾದದ ಪುನರುತ್ಥಾನ, ಜಾತಿ, ಅಸ್ಪೃಶ್ಯತೆ, ಜಾರಿ ವಿರೋಧ ರಾಜಕಾರಣ ಮತ್ತು ಕಾರ್ಯ, ಸ್ವಾತಂತ್ಯ್ರೋತ್ತರ ಭಾರತೀಯ ಮಹಿಳೆ ಹಾಗೂ ಹೊಸ ಸಹಸ್ರಮಾನದ ಆರಂಭ: ಸಾಧನೆಗಳು, ಸಮಸ್ಯೆಗಳು ಮತ್ತು ಭವಿಷ್ಯ ಕುರಿತು ವಿವರವಾಗಿ ಚರ್ಚಿಸಲಾಗಿದೆ.
©2024 Book Brahma Private Limited.