ತಾರಾಬಾಯಿ ಶಿಂಧೆ 19 ನೇ ಶತಮಾನದ ಭಾರತದಲ್ಲಿ ಪಿತೃಪ್ರಭುತ್ವ ಮತ್ತು ಜಾತಿಯನ್ನು ಪ್ರತಿಭಟಿಸಿದ ಸ್ತ್ರೀವಾದಿ ಕಾರ್ಯಕರ್ತೆ. ಮೂಲತಃ 1882 ರಲ್ಲಿ ಮರಾಠಿಯಲ್ಲಿ ಪ್ರಕಟವಾದ ಸ್ಟ್ರಿಪುರುಷ್ ತುಲಾನಾ ("ಮಹಿಳೆಯರು ಮತ್ತು ಪುರುಷರ ನಡುವಿನ ಹೋಲಿಕೆ") ಎಂಬ ಕೃತಿಗಾಗಿ ಇವರು ಹೆಸರುವಾಸಿಯಾದರು. ಈ ಕೃತಿ ಮೊಟ್ಟ ಮೊದಲ ಮಹತ್ವದ ಸ್ತ್ರೀವಾದಿ ಭಾವನೆಗಳ ಅಭಿವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದೆ.
ಇಂದು ಇಂಗ್ಲಿಷ್ ಆಳ್ವಿಕೆಯ ಪರಿಣಾಮವಾಗಿ ಕೆಲವಾದರೂ ಶೋಷಿತ ಮಹಿಳಾ ಸಮುದಾಯಕ್ಕೆ ಸೇರಿದವರು ಹಿಂಜರಿಕೆಯಿಂದಲೇ ಓದು, ಬರಹದಲ್ಲಿ ತೊಡಗಿದ್ದಾರೆ. ಆರ್ಯರು ಸಾವಿರಾರು ವರ್ಷಗಳಿಂದ ಎಲ್ಲ ರೀತಿಯಿಂದಲೂ , ಹೆಣ್ಣುಮಕ್ಕಳನ್ನು ಶೋಷಿಸುತ್ತಾ ಬಂದಿರುವಾಗ ಮತ್ತು ಈಗಲೂ ಅದನ್ನು ಮುಂದುವರಿಸಿರುವಾಗ ಅಂತಹ ಕುತಂತ್ರದ ಬಗ್ಗೆ ಹೆಣ್ಣು ಮಕ್ಕಳ ಕಣ್ಣು ತೆರೆಸುವ ಒಂದು ಚಿಕ್ಕ ಪ್ರಯತ್ನವನ್ನು ತಾರಾಬಾಯಿ ಶಿಂಧೆ ಈ ಪುಸ್ತಕದಲ್ಲಿ ಮಾಡಿದ್ದಾರೆ.
ಮಧ್ಯಮ ವರ್ಗದ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಪುರುಷನ ವಿರುದ್ದ ಅನೇಕ ತಕರಾರುಗಳಿದ್ದರೂ ಧ್ವನಿ ಎತ್ತದ ಸ್ತಿತಿಯಲ್ಲಿದ್ದಾಳೆ. ನೂರಿಪ್ಪತ್ತು ವರ್ಷಗಳ ಹಿಂದೆಯೇ ಶಿಂದೆಯವರು ಸ್ಪಷ್ಟವಾದ ಮಹಿಳಾಪರ ಹಾಗೂ ಪುರುಷ ವಿರೋಧಿ ದ್ವನಿಯೆತ್ತಿದ್ದು ಮೆಚ್ಚುವಂತದ್ದು. ಇದನ್ನು ಕನ್ನಡಕ್ಕೆ ಲೇಖಕಿ ಎನ್. ಗಾಯತ್ರಿ ತಂದಿದ್ದಾರೆ.
©2024 Book Brahma Private Limited.