ಶೆಕ್ಸ್ ಪಿಯರ್ ಅವರ ಹೆಸರಾಂತ ನಾಟಕ ರೋಮಿಯೊ ಜೂಲಿಯಟ್. ಅದರ ಸಾರಸಂಗ್ರಹವನ್ನು ಅಷ್ಟೇ ರಸವತ್ತಾಗಿ ಮಕ್ಕಳಿಗೆ ತಿಳಿಯುವಂತೆ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ನಾಟಕ ರೂಪದಲ್ಲಿ ನೀಡಲಾಗಿದೆ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ರೋಮಿಯೊ-ಜೂಲಿಯಟ್ ಅವರ ಪರಿಶುದ್ಧ ಪ್ರೇಮದ ವಿಷಯ ವಸ್ತುವನ್ನು ಈ ನಾಟಕ ಒಳಗೊಂಡಿದೆ. ಲೇಖಕರು ಈ ನಾಟಕದ ಸಾರವನ್ನು ಕನ್ನಡದಲ್ಲಿ ನೀಡಿದ್ದಾರೆ. ಈ ಕೃತಿಯು ಮೂಲ ನಾಟಕದ ಚಿಕ್ಕವೃತ್ತಾಂತ ಎಂದೂ ಹೇಳಬಹುದು. ಈ ನಾಟಕವು ವಿಶ್ವದ ಅತಿ ಶ್ರೇಷ್ಠ ನಾಟಕ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಪ್ರೇಮಿಗಳ ದುರಂತ ಕಥೆಯೂ ಆಗಿದೆ. ಎರಡು ಮನೆತನಗಳ ಮಧ್ಯೆ ದ್ವೇಷ ಇರುತ್ತದೆ. ಆ ಎರಡು ಮನೆತನಗಳಿಗೆ ಸಂಬಂಧಿಸಿದ ಈ ಪ್ರೇಮಿಗಳು ತಮ್ಮ ಪ್ರೇಮದಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಆ ಮನೆತನಗಳ ದ್ವೇಷ ಎಂದಿಗೂ ಆರುವುದಿಲ್ಲ.
©2024 Book Brahma Private Limited.