ದಖನ್ನಿನ ಇತಿಹಾಸದ ಕುರಿತು ಕಥನಶೈಲಿಯಲ್ಲಿ ಮೂಡಿಬಂದಿರುವ ಕೃತಿ ರೆಬೆಲ್ ಸುಲ್ತಾನರು. ಸುಮಾರು ಹತ್ತನೆಯ ಶತಮಾನದಿಂದ ಹದಿನೆಂಟರವರೆಗಿನ ದಖನ್ ಬೆಳವಣಿಗೆಗಳ ಚಿತ್ರಣವನ್ನು ಮನು ಎಸ್. ಪಿಳ್ಳೈ ಬಹಳ ವಿನೂತನ ನಿರೂಪಣಾ ಶೈಲಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹುತ್ವದ ಪರಿಕಲ್ಪನೆಯು ತೆಳುವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ರೆಬೆಲ್ ಸುಲ್ತಾನರು ಒಂದು ಪ್ರಮುಖ ಪುಸ್ತಕವಾಗಿ ನಮ್ಮೆಲ್ಲರಿಗೂ ಅನುಕೂಲವಾಗಬಹುದು. ಭಾರತದ ಇತಿಹಾಸವು ಎಂದಿಗೂ ಕಪ್ಪು-ಬಿಳುಪಿನ ಚೌಕಟ್ಟಾಗಿರಲಿಲ್ಲ, ಬದಲಾಗಿ ವಿವಿಧ ಧರ್ಮಗಳ, ಪದ್ಧತಿಗಳ, ರಾಜಕೀಯ, ಸಾಮಾಜಿಕ ರಚನೆಗಳ ಮಿಶ್ರಣದ ವರ್ಣಮಯ ಸ್ಥಳವಾಗಿತ್ತು ಎಂಬುದನ್ನು ಈ ಪುಸ್ತಕವು ವೃತ್ತಾಂತಗಳ ಸಮೇತವಾಗಿ ಈ ಕೃತಿಯು ನಿರೂಪಿಸುತ್ತದೆ.
©2024 Book Brahma Private Limited.