‘ಅಲೀಘಡ ಹಿಸ್ಟೋರಿಯನ್ ಸೊಸೈಟಿ’ಯ ಸಹಕಾರದಿಂದ ಪ್ರಕಟಿಸುವ ‘ಪೀಪಲ್ ಹಿಸ್ಟರಿ ಆಫ್ ಇಂಡಿಯಾ’ಪುಸ್ತಕ ಮಾಲೆಯ ಪ್ರಥಮ ಪುಸ್ತಕ ‘ಪ್ರಿಹಿಸ್ಟರಿ’ಯ ಅನುವಾದ. ಮೂಲ ಲೇಖಕರು ಇರ್ಫಾನ್ ಹಬೀಬ್. ಭಾರತ ಉಪಖಂಡದಲ್ಲಿ ಮಾನವ ವಿಕಾಸ, ಅವನ ಪರಿಕರ ಸಮೂಹ, ವ್ಯವಸಾಯದ ಉಗಮ ಮತ್ತು ಅದರ ವ್ಯಾಪ್ತಿಗಳಿಗೆ ಸಂಬಂಧಿಸಿದ ಅಧ್ಯಯನದ ಪರಿಚಯ ಮಾಡುವ ಕೃತಿ.
ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ವಿಜಯ್ ಪೂಣಚ್ಚ ತ೦ಬಂಡ ಅವರು ’ಪ್ರದೀಪ್ ಬೆಳಗಲ್ ಅವರು ಅನುವಾದಿಸಿರುವ ಇರ್ಫಾನ್ ಹಬೀಬ್ ಅವರ ’ಪೂರ್ವೆತಿಹಾಸ’ ಕೃತಿಯು ಕನ್ನಡದ ಬೌದ್ಧಿಕ ಪ್ರಪಂಚಕ್ಕೆ ಒಂದು ಹೊಸ ಸೇರ್ಪಡೆ. ಇತ್ತೀಚಿನ ಸಂಶೋಧನೆಯಾಧರಿತ ಇರ್ಫಾನ್ ಹಬೀಬ್ ಅವರ 'ಪೂರ್ವೆತಿಹಾಸ” ಕೃತಿಯು 'ಆಲಿಘರ್ ಹಿಸ್ಟೋರಿಯನ್ ಸೊಸೈಟಿ'ಯ ಸಹಕಾರದಿಂದ ಪ್ರಕಟಿಸುತ್ತಿರುವ “ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ” ಎನ್ನುವ ಪುಸ್ತಕ ಮಾಲೆಯ ಮೊದಲನೆಯ ಕನ್ನಡ ಆವೃತ್ತಿಯಾಗಿದೆ. 1947ರ ಪೂರ್ವದ ಭಾರತದ ರಾಜಕೀಯ ಗಡಿಗಳು ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಭೂತಾನ ಮತ್ತು ನೇಪಾಳಗಳನ್ನು ಒಳಗೊಂಡಿತ್ತು. ಪೂರ್ವೆತಿಹಾಸದ ಸಂದರ್ಭದಲ್ಲಿ ಈ ಬಗೆಯ ರಾಜಕೀಯ ಘಟಕಗಳು ಇತ್ತೋ ಅಥವಾ ಇಲ್ಲವೋ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತ ಉಪ ಖಂಡದಲ್ಲಿದ್ದುದೆನ್ನಲಾದ ಮಾನವ ವಿಕಾಸ, ಅವನ ಪರಿಕರ ಸಮೂಹ, ವ್ಯವಸಾಯದ ಉಗಮ ಮತ್ತು ಅದರ ವ್ಯಾಪ್ತಿಗಳಿಗೆ ಸಂಬಂಧಿಸಿದ ಅಧ್ಯಯನದ ಪರಿಚಯವನ್ನು ಪ್ರಸ್ತುತ ಕೃತಿಯು ಮಾಡಿಕೊಡುತ್ತದೆ’ ಎಂದು ವಿವರಿಸಿದ್ದಾರೆ.
ಭಾರತದ ಭೌತಿಕ ಲಕ್ಷಣಗಳ ರೂಪಗೊಳ್ಳುವಿಕೆ ಮತ್ತು ನೈಸರ್ಗಿಕ ಪರಿಸರ
1.1 ಭಾರತದ ಭೂವೈಜ್ಞಾನಿಕ ರೂಪಗೊಳ್ಳುವಿಕೆ
1.2 ಮಾನವನ ಆಗಮನದ ನಂತರ ಭೌಗೋಳಿಕ ಭಾರತ
1.3 ವಾತಾವರಣ
1.4 ನೈಸರ್ಗಿಕ ಸಸ್ಯಗಳು ಹಾಗೂ ವನ್ಯಜೀವನ
2 ನಮ್ಮ ಆರಂಭಿಕ ಪೂರ್ವಜರು
2.1 ಮನು ಕುಲದ ವಿಕಾಸ
2.2 ಭಾರತದಲ್ಲಿ ಆದಿ ಮಾನವ
2.3 ದೈಹಿಕವಾಗಿ ಆಧುನಿಕನಾದ ಮಾನವ
2.4 ಭಾರತದಲ್ಲಿ ಆಧುನಿಕ ಮಾನವ
2.5 ಮಧ್ಯಶಿಲಾಯುಗ ಸಂಸ್ಕೃತಿ
3 ನವಶಿಲಾಯುಗ ಕ್ರಾಂತಿ: ವ್ಯವಸಾಯ ಹಾಗೂ ಪ್ರಾಣಿಸಾಕಣೆಯಪ್ರವೇಶ
3.1 ನವಶಿಲಾಯುಗದ ಕ್ರಾಂತಿಯ ಅರ್ಥ
3.2 ಪಶ್ಚಿಮದ ಗಡಿಪ್ರದೇಶದಲ್ಲಿ ಮೊದಲ ಕೃಷಿ ಸಮುದಾಯಗಳು, - ಕ್ರಿ.ಪೂ. 7,000 ದಿಂದ-4,000ವರೆಗೆ
3.3 ಸಿಂಧೂ ಕಣಿವೆಯಲ್ಲಿ ಕಂಚಿನ ಯುಗದತ್ತ,ಕ್ರಿ ಪೂ 4,000 ದಿಂದ 3,200
3.4 ಭತ್ತದ ವ್ಯವಸಾಯ ಮತ್ತು ಕ್ರಿ ಪೂ 3,000 ನಂತರದ ಮಧ್ಯ ಹಾಗೂ ಪೂರ್ವ ಭಾರತದ ನವಶಿಲಾಯುಗ ಸಂಸ್ಕೃತಿಗಳು
3.5 ಕ್ರಿ ಪೂ 3000ದ ನಂತರದ ಉತ್ತರ ಹಾಗೂ ಪ್ರಾರಂಭಿಕ ದಕ್ಷಿಣದ ನವಶಿಲಾಯುಗ ಸಂಸ್ಕೃತಿಗಳು.
©2024 Book Brahma Private Limited.