ಒಂದೇ ಬಣ್ಣದ ಹಕ್ಕಿಗಳು

Author : ಆರ್.ವಿ. ಭಂಡಾರಿ

Pages 32

₹ 15.00




Year of Publication: 2010
Published by: ಬಂಡಾಯ ಪ್ರಕಾಶನ
Address: ಅರೇಅಂಗಡಿ, ಹೊನ್ನಾವರ, ಉತ್ತರ ಕನ್ನಡ- 581430

Synopsys

‘ಒಂದೇ ಬಣ್ಣದ ಹಕ್ಕಿಗಳು’ ಲೇಖಕ ಡಾ.ಆರ್. ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ನಾಟಕ. ಕೃತಿಯ ಕುರಿತು ಬರೆಯುತ್ತಾ ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಡಾ. ಆರ್.ವಿ. ಭಂಡಾರಿಯವರದು ಪ್ರಮುಖ ಹೆಸರು. ಕತೆ, ಕವನ, ನಾಟಕಗಳ ಮೂಲಕ ಅವರು ಮಕ್ಕಳ ಲೋಕದಲ್ಲಿ ಚಿರಪರಿಚಿತರು. ಈಗಾಗಲೇ ಅವರ 20ಕ್ಕೂ ಹೆಚ್ಚು ಮಕ್ಕಳ ನಾಟಕಗಳ ಸಂಕಲನಗಳು ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟವಾಗಿದೆ. ಮತ್ತು ಅದರ ಪ್ರತಿ ಮುಗಿದಿದೆ ಕೂಡ. ತೀರಾ ಮಹತ್ವದ ಆಶಯವುಳ್ಳ ಮಕ್ಕಳ ಮನಸ್ಸಿನಲ್ಲಿಯೂ ಕೂಡ ಹೊಸಕಾಲದ ಆಶಯ ಬಿತ್ತುವ ಕನಸುಹೊತ್ತ ಅವರ ನಾಟಕಗಳು ಇನ್ನಷ್ಟು ಹೆಚ್ಚು ಮಕ್ಕಳನ್ನು ತಲುಪಬೇಕೆನ್ನುವ ಆಶಯದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದೊಂದೇ ನಾಟಕವನ್ನು ಪ್ರಕಟಿಸಲು ಬಂಡಾಯ ಪ್ರಕಾಶನ ಹೊರಟಿದೆ ಇದನ್ನು ತಾವು ಬೆಂಬಲಿಸುತ್ತೀರೆಂಬ ನಂಬಿಕೆ ಪ್ರಕಾಶಕನದ್ದು ಎಂದಿದ್ದಾರೆ ಬಂಡಾಯ ಪ್ರಕಾಶನದ ಐ.ಕೆ.ಅನಿಲ.

About the Author

ಆರ್.ವಿ. ಭಂಡಾರಿ
(05 May 1936)

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...

READ MORE

Related Books