ನಾಳೆಯನ್ನು ಕಂಡವರು

Author : ಸುನಂದಾ ಕಡಮೆ

Pages 112

₹ 50.00




Published by: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ

Synopsys

ರಷ್ಯಾ ಕ್ರಾಂತಿಯ ಶತಮಾನೋತ್ಸವ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ  ಈ ಕೃತಿಯನ್ನು ಹೊರತಂದಿದೆ. 1917ರ ರಷ್ಯಾ ಕ್ರಾಂತಿಯ ಪೂರ್ವ ಹಾಗೂ ನಂತರದಲ್ಲಿನ ಮಹಿಳೆಯರ ಸ್ಥಿತಿಗತಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ವಿರುದ್ಧದ ಸೆಣಸಾಟದಲ್ಲಿ ಮಹಿಳೆಯರ ಪಾತ್ರವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಝಾರ್ ದೊರೆಯ ನಿರಂಕುಶ ಪ್ರಭುತ್ವ, ಬಂಡವಾಳಶಾಹಿ ಶೋಷಣೆ ಮತ್ತು ಜಮೀನುದಾರರ ದಾಸ್ಯದಡಿ ನಲುಗಿಹೋಗಿದ್ದ ರಷ್ಯಾದ ಮಹಿಳೆಯರ ಚಿತ್ರಣವನ್ನು ಕೃತಿಯಲ್ಲಿ ಕಾಣಬಹುದು. ಮದುವೆ ಹಾಗೂ ವಿಚ್ಛೇದನ, ಗರ್ಭಪಾತಕ್ಕೆ ಅವಕಾಶ, ಶಿಕ್ಷಣ, ಆರೋಗ್ಯ, ವೇಶ್ಯಾವಾಟಿಕೆ ರದ್ದು, ಕುಡಿತದ ಬಗ್ಗೆ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮಗಳು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊರೆತ ಉತ್ತೇಜನ ಇವುಗಳ ಬಗ್ಗೆ  ವಿವರಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಸುನಂದಾ ಕಡಮೆ
(27 August 1967)

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...

READ MORE

Related Books