ಅಶೋಕನ ಕಾಲದಲ್ಲಿ ಈ ದೇಶ ಅತ್ಯಂತ ವಿಸ್ತಾರ ರೂಪವನ್ನು ಪಡೆಯಿತು. ಹಾಗೆಯೇ ಬೌದ್ಧ ಧರ್ಮ ಉಚ್ಛಾಯವನ್ನು ತಲುಪಿತು. ಹಿಂಸೆ-ಅಹಿಂಸೆ, ವೈದಿಕ-ಅವೈದಿಕ ಸಂಘರ್ಷದ ಕಾಲವೂ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಮೌರ್ಯರ ಕಾಲದ ಭಾರತವನ್ನು ತಿಳಿಯುವ ಮೂಲಕ ಭಾರತದ ಸಾಮಾಜಿಕ ಪಲ್ಲಟಗಳನ್ನು ನಾವು ತಿಳಿಯಬಹುದಾಗಿದೆ. ಭಾರತದ ಜನ ಇತಿಹಾಸ ಸರಣಿಯ 5 ಕೃತಿಯಾಗಿ ಚಿಂತನ ಪುಸ್ತಕವು ಇರ್ಫಾನ್ ಹಬೀಬ್ ಅವರ “ಮೌರ್ಯರ ಕಾಲದ ಭಾರತ' ಕೃತಿಯನ್ನು ಹೊರತಂದಿದ್ದು, ನಗರಗೆರೆ ರಮೇಶ್ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಅಲೆಕ್ಸಾಂಡರ್ ದಾಳಿಯಿಂದಲೇ ಈ ಕೃತಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಜನಜೀವನ ಮತ್ತು ಅಲೆಕ್ಸಾಂಡರನ ದಾಳಿ ಈ ದೇಶದ ಜನರ ಮೇಲೆ ಮಾಡಿದ ಪರಿಣಾಮ, ನಂದವಂಶ ಮತ್ತು ಚಂದ್ರಗುಪ್ತ ಮೌರ್ಯರ ಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನು ಕೃತಿಯ ಆರಂಭದಲ್ಲಿ ಚರ್ಚಿಸಲಾಗಿದೆ. ಅಶೋಕನ ಶಾಸನಗಳು, ಅಶೋಕನ ಧಮ್ಮ, ಆಡಳಿತ ಆನಂತರದ ಮೌರ್ಯ ರಾಜರ ಅವನತಿಯನ್ನು ಅತ್ಯಂತ ಕುತೂಹಲಕರವಾಗಿ ವಿಶ್ಲೇಷಿಸುತ್ತದೆ. ಚಾಣಕ್ಯನ ಅರ್ಥಶಾಸ್ತ್ರದ ಕುರಿತಂತೆಯೂ ಮಹತ್ವ ಪೂರ್ಣವಾದ ವಿವರಗಳು ಈ ಕೃತಿಯಲ್ಲಿವೆ.
©2024 Book Brahma Private Limited.