ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ

Author : ಎಚ್.ಎಸ್. ಅನುಪಮಾ

Pages 160

₹ 120.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಮಹಿಳಾ ಹೋರಾಟದ ಎಲ್ಲೆಗಳನ್ನು ವಿಸ್ತರಿಸುವಂತೆ ಇರುವ ಕೃತಿ ಹಿರಿಯ ಕವಯತ್ರಿ, ಚಿಂತಕಿ ಡಾ. ಎಚ್. ಎಸ್. ಅನುಪಮಾ ಅವರು ಬರೆದ ’ಮಹಿಳೆ- ದಲಿತ ಮತ್ತು ರಾಜಕೀಯ ಪ್ರಜ್ಞೆ’ ಕೃತಿ. ಮಹಿಳಾ ಚಳವಳಿಗೆ ಬೇಕಾಗಿರುವ ಸಮತೋಲನ, ತಾತ್ವಿಕತೆ, ಅದು ವಿಸ್ತರಿಸಿಕೊಳ್ಳಬೇಕಾದ ಬಗೆಗಳನ್ನು ಲೇಖಕಿ ಜತನದಿಂದ ವಿವರಿಸಿದ್ದಾರೆ. ಇದಕ್ಕಾಗಿ ಅವರು ಬಳಸಿರುವುದು ರೂಪಕಗಳ ಭಾಷೆ. 

ಮಹಿಳೆಯ ವರ್ತಮಾನ, ಭೂತ ಮತ್ತು ಭವಿಷ್ಯವನ್ನು ಚರ್ಚಿಸಲು ವಿವಿಧ ವ್ಯಕ್ತಿಗಳು ಮತ್ತು ಪ್ರಕರಣಗಳನ್ನು ಸಾಧನವಾಗಿ ಪರಿಗಣಿಸಲಾಗಿದೆ. ಕರಾವಳಿಯ ಜನಪದ ಗಾಯಕಿ ಸುಕ್ರಿ ಬೊಮ್ಮನೌಡ ಅವರಿಂದ ಹಿಡಿದು ರಾಣಿ ಚೆನ್ನಭೈರಾದೇವಿಯವರೆಗೆ, ಆಂಗ್ ಸಾನ್‌ ಸೂಕಿಯಿಂದ ಹಿಡಿದು ಏಂಜೆಲಾ ಡೆವಿಸ್‌ ವರೆಗೆ ಇಲ್ಲಿನ ಲೇಖನಗಳು ವಿಸ್ತರಿಸಿಕೊಂಡಿವೆ. 

ಸ್ತ್ರೀವಾದಿ ಬರಹಗಳಾಚೆಗೆ, ಪುರುಷರನೂ ಜೊತೆ ಸೇರಿಸಿಕೊಂಡು ಅವರು ಇಲ್ಲಿ ಮಹಿಳೆಯನ್ನು ನಿರೂಪಿಸಿದ್ದಾರೆ. ಯಾವುದೇ ಅಧ್ಯಯನೀಯ ಶಿಸ್ತಿನಿಂದ ರೂಪುಗೊಂಡಿರುವ ಕೃತಿ ಇದಲ್ಲ. ಲೇಖಕಿಯೇ ಹೇಳುವಂತೆ ಕಾಲ, ಸಂದರ್ಭಕ್ಕೆ ತಕ್ಕಂತೆ ಬರೆದವುಗಳು. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books