ಜಾತಿ, ಧರ್ಮ,ವರ್ಗ, ಜನಾಂಗ ಹಾಗು ಪ್ರಾದೇಶಿಕ ಹಿನ್ನೆಲೆಯಲ್ಲಿ ಭಿನ್ನವಾಗಿರುವ, ಜೈವಿಕ ಹಾಗೂ ಜಂಡರ್ ಕಾರಣದಿಂದಾಗಿ ಜಗತ್ತಿನಾದ್ಯಂತ ಮಹಿಳೆಯರು ಅಸಮಾನತೆ, ತಾರತಮ್ಯಕ್ಕೊಳಗಾಗಿ, ಹಕ್ಕು ಸ್ವಾತಂತ್ರ್ಯಗಳಿಂದ ವಂಚಿತರಾಗಿದ್ದಾರೆ. ಇವರಲ್ಲಿ ಮೂಲಭೂತ ಬದಲಾವಣೆ ತರಲು, ಜನರ ಮನಸ್ಥಿತಿಯಲ್ಲಿ ಬೇರೂರಿರುವ ತಾರತಮ್ಯ ಮನೋಭಾವವನ್ನು ಹೋಗಲಾಡಿಸಲು, ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ, ಮಹಿಳಾ ಸಶಕ್ತೀಕರಣದ ವಿವಿಧ ಆಯಾಮಗಳನ್ನು, ಸ್ತ್ರೀವಾದ, ಆರ್ಥಿಕ ಅಭಿವೃದ್ಧಿ, ರಾಜಕೀಯ, ಕಾನೂನು ಮತ್ತು ಮನೋವಿಶ್ಲೇಷಣಾತ್ಮಕ ದೃಷ್ಟಿಯಿಂದ ವಿವರಿಸಿರುವ ಈ ಕೃತಿಯು ಮಹಿಳಾ ಅಧ್ಯಯನಕಾರರಿಗೆ, ಮಹಿಳಾ ಸಮಸ್ಯೆಗಳಿಗೆ ಪರಿಹಾರ ಹುಡುಕುವವರಿಗೆ ಮತ್ತು ಸ್ತ್ರೀವಾದದ ವಿವಿಧ ಮಗ್ಗಲುಗಳ ಬಗ್ಗೆ ಈ ಕೃತಿ ಮಾಹಿತಿಯನ್ನು ನೀಡುತ್ತದೆ.
©2024 Book Brahma Private Limited.