ಭಾರತದ ಸ್ವಾತಂತ್ರ್ಯ ಚಳುವಳಿಯ ಒಡಲಲ್ಲಿ ಜನಿಸಿದ ಮಹಿಳಾ ಚಳುವಳಿಗೆ ಸುಮಾರು ಒಂದು ಶತಮಾನದ ದೀರ್ಘ ಇತಿಹಾಸವಿದೆ. ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಹುಟ್ಟಿದ ಮಹಿಳಾ ಚಳುವಳಿ ನವ ವಸಾಹತುಶಾಹಿಯ ಯುಗದವರೆಗೂ ಹಾದುಬಂದ ವಿವಿಧ ಮಜಲುಗಳ ಸ್ತೂಲ ಪರಿಚಯ ಈ ಕೃತಿಯಲ್ಲಿದೆ.
ಚರಿತ್ರೆಯಲ್ಲಿ ದಾಖಲಾಗಿರುವ ಹೆಣ್ಣಿನ ಜೀವನ ಮತ್ತು ಬದುಕನ್ನು ಹಾಗೂ ಅವಳು ನಿರ್ವಹಿಸಿದ, ಭಾಗವಹಿಸಿದ ಚಳುವಳಿಯನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಪ್ರಯತ್ನ ಇಲ್ಲಿಯದು. ಪುರುಷ ನೇತೃತ್ವದ ಸಾಮಾಜಿಕ ಚಳುವಳಿಗಳಾದ ಗಾಂಧಿ ಚಳುವಳಿ, ಗ್ರಾಮೀಣ ಚಳುವಳಿಗಳಿ, ದ್ರಾವಿಡ ಚಳುವಳಿಗಳಲ್ಲಿ ಮಹಿಳೆಯ ಪಾತ್ರದ ಸೋಲು-ಗೆಲುವುಗಳನ್ನು ಕುರಿತ ಚರ್ಚೆ ಈ ಕೃತಿಯಲ್ಲಿದೆ.
ಅಂತರರಾಷ್ಟ್ರೀಯ ಪ್ರಭಾವದಿಂದ ಪ್ರೇರಿತವಾದರೂ ಈ ನೆಲದ ಅಗತ್ಯಕ್ಕೆ ಸ್ಪಂದಿಸಿದ ಭಾರತದ ಮಹಿಳಾ ಚಳುವಳಿಯ ಸ್ವರೂಪ ಮತ್ತು ಕರ್ನಾಟಕದಲ್ಲಿ ಅದು ಪಡೆದುಕೊಂಡ ಅನುಭವಗಳ ಮೇಲೂ ಇಲ್ಲಿ ಬೆಳಕು ಚೆಲ್ಲಲಾಗಿದೆ. ಈ ಕೃತಿಯ ಲೇಖಕಿ ಶ್ರೀಮತಿ ಎನ್. ಗಾಯತ್ರಿ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರವು ಪ್ರಕಟಿಸುತ್ತಿರುವ 'ಅಚಲ' ಮಹಿಳಾ ಪತ್ರಿಕೆಯ ಸಂಪಾದಕಿ.
©2024 Book Brahma Private Limited.