Machbeth ಎಂಬುದು ಶೆಕ್ಸ್ ಪಿಯರ್ ಅವರ ನಾಟಕ. ಇದು ಶೆಕ್ಸ್ ಪಿಯ್ ನ ಅತ್ಯಂತ ಕರಾಳ ಹಾಗೂ ದುರಂತ ನಾಟಕಗಳ ಪೈಕಿ ಒಂದು. ಈ ನಾಟಕದ ಸಣ್ಣ ವೃತ್ತಾಂತವಾಗಿ ಲೇಖಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಮಕ್ಕಳಿಗಾಗಿ ನಾಟಕ ರಚಿಸಿದ್ದಾರೆ. ಅಧಿಕಾರ ಎಂದರೆ ಪ್ರಾಣವಾಗಿಸಿಕೊಂಡ ಸ್ಕಾಟ್ ಲ್ಯಾಂಡ್ ನ ಶ್ರೀಮಂತ ವ್ಯಕ್ತಿ ಮ್ಯಾಕ್ ಬೆತ್ ಮತ್ತು ಆತನ ಹೆಂಡತಿ ಮಧ್ಯೆ ಈ ನಾಟಕದ ವಸ್ತು ಸುತ್ತುತ್ತದೆ. ಅವರಿಬ್ಬರೂ ರಾಜ ಡಂಕನ್ ನನ್ನು ಕೊಲ್ಲಲು ಸಂಚು ಹೂಡುತ್ತಾರೆ. ಡಂಕನ್ ನನ್ನು ಕೊಲೆ ಮಾಡಿದ ನಂತರ ಮ್ಯಾಕ್ ಬೆತ್, ದೊರೆಯಾಗುತ್ತಾನೆ. ಆದರೆ, ಆತನಿಗೆ ಪಾಪಪ್ರಜ್ಞೆ, ಭೀತಿ ಕಾಡುತ್ತದೆ. ಬುದ್ಧಿಭ್ರಮಣೆಯಾಗುತ್ತದೆ. ಇಷ್ಟು ನಾಟಕದ ಕಥಾ ವಸ್ತು. ಮಕ್ಕಳಿಗೂ ಈ ಗಂಭೀರ ನಾಟಕ ಸರಳವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ಕೃತಿ ರಚನೆಗೊಂಡಿದೆ. ಶೆಕ್ಸ್ ಪಿಯರ್ ನಾಟಕಗಳಲ್ಲಿಯ ಗಂಭೀರತೆಯನ್ನು ಸರಳವಾಗಿ ತಿಳಿಯಲು ಇಂತಹ ಕೃತಿಗಳು ಸಹಾಯಕವಾಗಿವೆ.
©2024 Book Brahma Private Limited.