ಕೀರ್ತಿನಾಥ ಕುರ್ತಕೋಟಿ

Author : ಕೃಷ್ಣಮೂರ್ತಿ ಚಂದರ್‌

Pages 104

₹ 70.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಕೀರ್ತಿನಾಥ ಕುರ್ತಕೋಟಿ ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳೆರಡರಲ್ಲಿ ಪ್ರಮುಖ ಹೆಸರು. ಲೇಖಕರ ಒಂದು ಪಡೆಯನ್ನೇ ಬೆಳೆಸಿದ್ದಕ್ಕಾಗಿಯೂ ಅವರು ಸ್ಮರಣೀಯರಾಗಿದ್ದಾರೆ. ಸಂಪಾದನೆ, ಅನುವಾದ, ಅಂಕಣ ಬರೆಹಗಳ ಕ್ಷೇತ್ರಗಳಲ್ಲಿ ಅವರ ಸೇವೆ ಗಮನಾರ್ಹವಾಗಿದ್ದರೂ ನಾಟಕ ಮತ್ತು ವಿಮರ್ಶೆ ಅವರ ಪ್ರಧಾನ ಕ್ಷೇತ್ರಗಳು. ಅವರ ವಿಮರ್ಶಾ ಕೃತಿಗಳು ಆಧುನಿಕ ಕನ್ನಡ ವಿಮರ್ಶೆಯ ಕ್ಷೇತ್ರಕ್ಕೆ ಹೊಸ ಚೈತನ್ಯ-ಸ್ಫೂರ್ತಿಗಳನ್ನು ನೀಡಿವೆ.ಕೀರ್ತಿನಾಥ ಕುರ್ತಕೋಟಿಯವರಿಗೆ  ’ಉರಿಯ ನಾಲಗೆ’ ವಿಮರ್ಶಾ ಕೃತಿಗೆ 1995ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. 

ಈ ಪುಸ್ತಕದಲ್ಲಿ ಕೃಷ್ಣಮೂರ್ತಿ ಚಂದರ್‌ ಅವರು ಕೀರ್ತಿನಾಥ ಕುರ್ತಕೋಟಿಯವರ ಜೀವನ ಮತ್ತು ಸಾಧನೆಯನ್ನು ಕಟ್ಟಿಕೊಟ್ಟಿದ್ದಾರೆ.

About the Author

ಕೃಷ್ಣಮೂರ್ತಿ ಚಂದರ್‌

ಕೃಷ್ಣಮೂರ್ತಿ ಚಂದರ್  ಹುಟ್ಟಿದ್ದು 1954ರಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಇಡಿ, ಎಂ.ಎ, ಪಿ.ಎಚ್ ಡಿ ಪಡೆದು ಆನಂತರ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books