ಕೆ.ಎಸ್. ನರಸಿಂಹಸ್ವಾಮಿ

Author : ರಾಮೇಗೌಡ (ರಾಗೌ)

Pages 114

₹ 90.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಪ್ರೇಮ ಕವಿ ಎಂದೇ ಹೆಸರಾಗಿರುವ ಕೆ.ಎಸ್. ನರಸಿಂಹಸ್ವಾಮಿಯವರು ಜನಪ್ರಿಯತೆಯ ಉತ್ತುಂಗಕ್ಕೇರಿದ ಆಧುನಿಕ ಕನ್ನಡ ಕವಿಗಳಲ್ಲಿ ಒಬ್ಬರು. ಆಧುನಿಕ ಕಾವ್ಯಪ್ರಕಾರದ ವಿವಿಧ ಘಟ್ಟಗಳ ಪ್ರತೀಕವಾಗಿರುವ ಸಾಹಿತ್ಯ ಪಂಥಗಳನ್ನು ಪ್ರತಿನಿಧಿಸುವಂಥ ಸಾಹಿತ್ಯವನ್ನು ಸೃಷ್ಟಿಸಿದವರು. ಗದ್ಯ ಸಾಹಿತ್ಯಕ್ಕೂ ಕೆಲವೊಂದು ಸುಂದರ ಕೃತಿಗಳನ್ನು ನೀಡಿರುವಂಥವರು. ಅನುವಾದದ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಉತ್ತಮವೂ ಅರ್ಥಪೂರ್ಣವೂ ಆಗಿರುವಂಥ ಕಾಣಿಕೆಗಳನ್ನು ಸಲ್ಲಿಸಿರುವಂಥವರು. ಅವರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ 1977ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. 

ಕೆ. ಎಸ್. ನರಸಿಂಹಸ್ವಾಮಿಯವರ ಬದುಕು ಮತ್ತು ಬರಹವನ್ನು ಪ್ರಸ್ತುತ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ವಿಮರ್ಶಕ, ಸಂಶೋಧಕ ಹಾಗೂ ಜಾನಪದ ತಜ್ಞರೂ ಆದ ಡಾ. ರಾಮೇಗೌಡ (ರಾಗೌ) ಅವರು ನವಕರ್ನಾಟಕ ಪ್ರಕಾಶನಕ್ಕಾಗಿ ’ಮಲ್ಲಿಗೆ ಕವಿ’ಯನ್ನು ಪರಿಚಯಿಸಿದ್ದಾರೆ. 

About the Author

ರಾಮೇಗೌಡ (ರಾಗೌ)

ಜಾನಪದ ವಿದ್ವಾಂಸ ಡಾ. ರಾಮೇಗೌಡ (ರಾಗೌ) ಅವರು ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕರು ಕೂಡ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ) ಅವರ ಪ್ರಕಟಿತ ಕವನ ಸಂಕಲನಗಳು. ದೊರೆ ದುರ್ಯೋಧನ (ನಾಟಕ) ಮತ್ತು ಕುಮಾರ ರಾಮ, ಕಂದನ ಕವನಗಳು, ಆರು ಪ್ರಾಣಿಕಥೆಗಳು (ಮಕ್ಕಳ ಸಾಹಿತ್ಯ) ಕೃತಿಗಳನ್ನು ಪ್ರಕಟಿಸಿದ್ದಾರೆ.  ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ದುರ್ಗಸಿಂಹ, ಪ್ರಾಸ್ತಾವಿಕ(ವಿಮರ್ಶೆ) , ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ (ಸಂಶೋಧನ ಕೃತಿಗಳು)   ಕೆ.ಎಸ್.ನರಸಿಂಹಸ್ವಾಮಿ (ಜೀವನ ಚರಿತ್ರೆ),  ಸಾಹಸ , ಭೀಮವಿಜಯ, ಅಜಿತತೀರ್ಥಂಕರ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ (ಗ್ರಂಥಸಂಪಾದನೆ) ಮತ್ತು ನಮ್ಮ ಗಾದೆಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ...

READ MORE

Related Books