ಖ್ಯಾತ ಸಾಹಿತಿ ದೇ. ಜವರೇಗೌಡ ಅವರು ಬರೆದ ಕೃತಿ-ಜನಪದ ಗೀತಾಂಜಲಿ. ಜನಪದ ಸಾಹಿತ್ಯವು ಅಮರ. ಜನಪದ ಸಾಹಿತ್ಯದ ಯಾವುದೇ ಪ್ರಕಾರದ ಸೃಷ್ಟಿಗೆ ಜೀವನಾನುಭವವೇ ಮೂಲ. ಈ ಅನುಭವದ ಮೂಲಕವೇ ಜೀವನ ಮೌಲ್ಯಗಳನ್ನು-ಆದರ್ಶಗಳನ್ನು-ಉದ್ದೇಶಗಳನ್ನುಸ್ಪಷ್ಟಪಡಿಸುತ್ತವೆ. ಕೇವಲ ಮೌಖಿಕ ಸಾಹಿತ್ಯವಾಗಿಯೇ ಮುಂದುವರಿದುಕೊಂಡು ಬಂದಿದ್ದ ಜನಪದ ಸಾಹಿತ್ಯಕ್ಕೆ, ನೈಸರ್ಗಿಕ ಸಾಮರ್ಥ್ಯವಿದೆ. ಗೀಗೀ ಪದಗಳು, ಕೋಲಾಟದ ಪದಗಳು, ಮೊಹರಂ ಆಚರಣೆಯ ಪದಗಳು, ಕುಟ್ಟುವ-ಬೀಸುವ ಹಾಡುಗಳು ಹೀಗೆ ಜನಪದ ಸಾಹಿತ್ಯವು ಜನಜೀವನದ ಶ್ರೀಮಂತಿಕೆಯನ್ನು ತೋರುತ್ತವೆ.
©2024 Book Brahma Private Limited.