ಅಮ್ಮ ಬಾರಮ್ಮ ಹುಲಿಗಿ ಮಾರಮ್ಮ ಅಪ್ಪ ಬಾರಪ್ಪ ಮೈಲಾರ ಲಿಂಗ ನಿನ್ನ ನಾವು ನೆನಸಿವಿ ತಾತ ಹಂಪೆ ಒಳಗಿರುವ ಪಂಪಾಪತಿ ವಸಿಪ್ಯಾಟಿ ಗಾಳಿಮಾರಮ್ಮ' ಹೀಗೆ ಒಂದರ ಹಿಂದೆ ಒಂದು ಹಾಡನ್ನು ಹಾಡುತ್ತಾ ತಂಬೂರಿ ಬಾರಿಸುತ್ತಾ, ದೇವರನ್ನು ನೆನೆಯುವ ಜಾನಪದ ಗಾಯಕರಲ್ಲಿ ದರೋಜಿ ಈರಮ್ಮ ಒಬ್ಬರು. ಅವರು ಹಾಡಿದ ಮಾರ್‍ವಾಡಿ ಶೇಠ್ ಜಾನಪದ ಕಾವ್ಯದ ಕುರಿತು ಈ ಕೃತಿಯು ವಿವರಿಸುತ್ತದೆ.
ಬಾಯಿಂದ ಬಾಯಿಗೆ ಪಸರಿಸಿದ ಜಾನಪದ ಕಾವ್ಯಗಳು ಹಲವು. ಅದರಲ್ಲಿ ಮಾರ್‍ವಾಡಿ ಶೇಠ್ ಕೂಡ ಒಂದು. ಅಕ್ಷರ ಜ್ಞಾನವಿಲ್ಲದ ಸಮುದಾಯವು ಜನರನ್ನು ತಲುಪುವ ಪರಿ ಈ ಕೃತಿಯಲ್ಲಿ ಕಂಡುಬರುತ್ತದೆ.
©2025 Book Brahma Private Limited.