ಜನಪದ ಸಾಹಿತ್ಯದಲ್ಲಿ ಒಂದು ಪ್ರಮುಖ. ಪರಿಣಾಮಕಾರಿ ಹಾಡಿನ ಪ್ರಕಾರ-’ಗೀಗೀ’ ಪದಗಳು. ಲಾವಣಿ ರೂಪಾಂತರಗೊಂಡು ಮತ್ತಷ್ಟು ಪರಿಣಾಮಕಾರಿ ‘ಗೀಗಿ’ಯಾಗಿದ್ದನ್ನು ಸಂಶೋಧಕರು ಸ್ಪಷ್ಟಪಡಿಸುತ್ತಾರೆ. ವಿಜಾಪುರ ಜಿಲ್ಲೆಯ ಪಶ್ಚಿಮದ ಕೃಷ್ಣಾ ತೀರದ ಪ್ರದೇಶದಲ್ಲಿ ’ಜೀ’ ಪದದ ಬಳಗೆ ವಿಶೇಷವಾಗಿದ್ದು, ಅಲ್ಲಿ ‘ಜೀ; ಪದವೆಂದೇ ಹೇಳುತ್ತಿದ್ದರು. ವಿಜಾಪುರ ಜಿಲ್ಲೆಯ ಪೂರ್ವಭಾಗದಲ್ಲಿ ‘ಗೀ’ ಪ್ರಾಧಾನ್ಯತೆ ಪಡೆದು, ಅವು, ‘ಗೀಗೀ’ ಪದಗಳೆಂದು ಪ್ರಖ್ಯಾತಿ ಪಡೆದವು. ಈಗ ಅವುಗಳನ್ನು ಜನಪದರಲ್ಲಿ ಗೀಗಿ ಪದಗಳೆಂದೇ ದಟ್ಟವಾಗಿ ಗುರುತಿಸಲಾಗುತ್ತಿದೆ. ಈ ಕೃತಿಯಲ್ಲಿ ಗೀಗಿ ಪದಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ. ಡಾ.ಎಂ.ಜಿ. ಬಿರಾದಾರ (ಮ.ಗು. ಬಿರಾದಾರ) ಹಾಗೂ ಡಾ.ಬಿ.ಎಸ್. ಕೋಟ್ಯಾಳ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.