ಹಳ್ಳಿಗಳಲ್ಲಿ ಈ ಹಿಂದೆ ಮದುವೆಗಳು ಏಳು ದಿನಗಳವರೆಗೆ ನಡೆಯುತ್ತಿದ್ದವಂತೆ. ಹೆಣ್ಣು ನೋಡುವುದಕ್ಕೆ ಏಳು ಜೊತೆ ಎಕ್ಕಡ ಸವೆತಿದ್ವು ಎಂಬ ಮಾತು ರೂಢಿಯಲ್ಲಿದೆ. ಒಂದು ಮನೆಯಿಂದ ನೋಡಿ ತಂದ ಹೆಣ್ಣು ಮತ್ತೊಂದು ಮನೆಯ ಒಡತಿಯಾಗಿ ಮೆರೆಯುವ ಕ್ರಮವೇ ವಿಲಕ್ಷಣವಾದದ್ದು. ಹಾಗಾಗಿ, ದೊಡ್ಡ ಕುಟುಂಬದಲ್ಲಿ ಎಲ್ಲರ ಪ್ರೀತಿ ಗಳಿಸಿ ಮನೆ-ಮನಗಳನ್ನು ತುಂಬುವ ಹೆಣ್ಣು ಹೇಗಿರಬೇಕೆಂಬ ಗುಣಾವಗುಣಗಳ ಪಟ್ಟಿಯೇ ಬಹಳ ದೊಡ್ಡದಿರುತ್ತಿತ್ತು.
ಪ್ರಸ್ತುತ ಕೃತಿಯು ಮದುವೆ ಸಮಯದ ಹಾಡುಗಳನ್ನು ಒಳಗೊಂಡಿದೆ. ಹೆಣ್ಣು ಮೈನೆರೆದ ಹಾಡುಗಳು, ದೇವರ ಪದಗಳು, ಹೆಣ್ಣು ಕೇಳುವ ಮತ್ತು ನೋಡುವಾಗಿನ ಶಾಸ್ತ್ರದ ಹಾಡುಗಳು, ಅರಿಶಿಣ ಹಚ್ಚುವ ಮತ್ತು ಎಣ್ಣೆ ನೀರು ಹಾಕುವ ಶಾಸ್ತ್ರದ ಹಾಡುಗಳು, ಹಸೆಯ ಹಾಡುಗಳು, ಸಾಸುವೆ ಇಡುವ ಹಾಡುಗಳು, ಬೀಗರನ್ನು ಎದುರುಗೊಳ್ಳುವ ಹಾಡುಗಳು, ಧಾರೆಗೆ ಮುಂಚಿನ ಶಾಸ್ತ್ರದ ಹಾಡುಗಳು, ಧಾರೆಯ ಶಾಸ್ತ್ರದ ಹಾಡುಗಳು, ಬೀಗರು ಜರಿಯುವ ಪದಗಳು, ವಿವಿಧ ಶಾಸ್ತ್ರದ ಹಾಡುಗಳು, ಬುವ್ವದ ಹಾಡುಗಳು, ಬಾಗಿಲು ತಡೆಯುವ ಹಾಡುಗಳು, ಆರತಿ ಬೆಳಗುವ ಹಾಡುಗಳು, ಹೆಣ್ಣೊಪ್ಪಿಸುವ ಹಾಡುಗಳು, ಅಕ್ಕನನ್ನು ಕರೆಯುವ ಹಾಗೂ ವಿವಿಧ ಬಗೆಯ ಹಾಡುಗಳು ಈ ಕೃತಿಯಲ್ಲಿವೆ.
©2024 Book Brahma Private Limited.