ಜಾನಪದ ವಿಸ್ತಾರದಷ್ಟೇ ಜನಪದ ಸಾಹಿತ್ಯದ ಹರವು ವ್ಯಾಪಿಸಿಕೊಂಡಿದೆ.ಶಿಷ್ಟ ಸಾಹಿತ್ಯ ಹೂ- ಫಲದ ಬೇರು- ಬೊಡ್ಡೆಯಷ್ಟೇ ಅಲ್ಲ ಇದು.ಒಟ್ಟು ಜೀವನದ ಮೂಲವು ಆದಂತೆ,ಅದರೊಂದಿಗೆ ಹಾಸುಹೊಕ್ಕಾಗಿ ಬೆರೆತುಕೊಂಡಿದೆ.ಶಿಷ್ಟ ಸಾಹಿತ್ಯವೇನಿದ್ದರೂ ಕೃತಕವಾದುದು.ಆದರೆ ಜನಪದ ಸಾಹಿತ್ಯಕ್ಕೆ ಕೃತಿಮವೆಂಬುದೆ ತಿಳಿದಿಲ್ಲವೆಂದರೆ ಅತಿಶಯದ ಹೇಳಿಕೆಯೆನ್ನಿಸಲಾರದು. ನಿಸರ್ಗದಂತೆ ಸಹಜ ಸುಂದರವಾದ ಜನಪದ ಸಾಹಿತ್ಯವು ಒಟ್ಟು ಜನ ಬದುಕಿನ ಪ್ರತಿಬಿಂಬವಾಗಿ ಗೋಚರಿಸುವಂತೆ ,ಅವರ ಮಡಿಲಿನಿಂದಲೇ ಉದ್ಬವಗೊಂಡು ಆಗಿರುತ್ತದೆ. ಆದುದರಿಂದ ಬದುಕಿನ ಶಕ್ತಿಉಷ್ಟೇ ಜನಪದ ಸಾಹಿತ್ಯಕ್ಕೆ ಸತ್ವವಿದೆ,ಸಾಮರ್ಥ್ಯವಿದೆ.ಅದರಲೂ ಜನಪದ ಕಾವ್ಯ ಕ್ರಿಯೆಯು ಒಂದು ಅರ್ಥದಲ್ಲಿ ಜನಪದರು ಸಹಜವಾಗಿ ಬದುಕಿದ್ದ,ಬದುಕಿತ್ತಿರುವ ಬದುಕಿನ ಪಾಡಿಗೆ ಕಲಾತ್ಮಕ ರೂಪವು ನೀಡಿದೆ.ಶಿಷ್ಟಸಾಹಿತ್ಯ -ಶಿಷ್ಟ ಜನಪರಂಪರೆಯಲ್ಲಿ ಇದರ ಬಗೆಗೆ ಅವಹೇಳನದ ದೃಷ್ಟಿಕೋನವಿದ್ದಿತೆಂಬ ಬಾವನೆ ವಿದ್ವಾಂಸರಲ್ಲಿದೆ.
©2024 Book Brahma Private Limited.